ಝೀರೊ‌ ಟ್ರಾಫಿಕ್ ವ್ಯವಸ್ಥೆ ಮಾಡಿ ರೋಗಿಯ ಹೃದಯ ಕಸಿಗೆ ನೆರವಾದ ಬೆಂಗಳೂರು ಟ್ರಾಫಿಕ್ ಪೊಲೀಸರು;ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 29, 2024 | 9:26 PM

ಬೆಂಗಳೂರು ಟ್ರಾಫಿಕ್ ಪೊಲೀಸರು ರೋಗಿಯೊಬ್ಬರ ಹೃದಯ ಕಸಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಝೀರೊ‌ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ರೋಗಿಯ ಬಾಳಿಗೆ ಬೆಳಕಾಗಿದ್ದಾರೆ. ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಬ್ರೈನ್ ಡೆಡ್ ಆಗಿ ಮೃತಪಟ್ಟವನ ಹೃದಯವನ್ನು ಚೆನ್ನೈನಲ್ಲಿರುವ ರೋಗಿಯ ಹೃದಯ ಕಸಿಗೆ ರವಾನೆ ಮಾಡಬೇಕಾಗಿತ್ತು. ಈ ಹಿನ್ನಲೆ ಆ್ಯಂಬುಲೆನ್ಸ್​ಗೆ ಝೀರೊ‌ ಟ್ರಾಫಿಕ್ ಮಾಡಿಕೊಟ್ಟಿದ್ದಾರೆ.

ಬೆಂಗಳೂರು, ಫೆ.29: ಟ್ರಾಫಿಕ್​ ಪೊಲೀಸರು(Traffic Police) ಅಂದಾಕ್ಷಣ ವಾಹನ ಸವಾರರನ್ನು ರಸ್ತೆ ಮಧ್ಯೆ ತಡೆದು ತೊಂದರೆ ಕೊಡುವುದನ್ನು ನೋಡಿದ್ದೇವೆ. ಆದರೆ, ಇಂದು ಬೆಂಗಳೂರು ಟ್ರಾಫಿಕ್ ಪೊಲೀಸರು ರೋಗಿಯೊಬ್ಬರ ಹೃದಯ ಕಸಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಝೀರೊ‌ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ರೋಗಿಯ ಬಾಳಿಗೆ ಬೆಳಕಾಗಿದ್ದಾರೆ. ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಬ್ರೈನ್ ಡೆಡ್ ಆಗಿ ಮೃತಪಟ್ಟವನ ಹೃದಯವನ್ನು ಚೆನ್ನೈನಲ್ಲಿರುವ ರೋಗಿಯ ಹೃದಯ ಕಸಿಗೆ ರವಾನೆ ಮಾಡಬೇಕಾಗಿತ್ತು. ಈ ಹಿನ್ನಲೆ ಬೆಂಗಳೂರು ಉತ್ತರ ವಿಭಾಗ ಸಂಚಾರ ಪೊಲೀಸರು, ಗ್ರೀನ್ ಕಾರಿಡಾರ್ ಮೂಲಕ ಏರ್ಪೋರ್ಟ್​ವರೆಗೂ ತಲುಪಿಸಲು ಆ್ಯಂಬುಲೆನ್ಸ್​ಗೆ ಝೀರೊ‌ ಟ್ರಾಫಿಕ್ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Feb 29, 2024 09:25 PM