ಶಿವರಾಮ್ ಅವರ ಎರಡು ಮುಖಗಳನ್ನು ದಲಿತ ಯುವಕರು ಗಮನಿಸಬೇಕು: ನಾಗತಿಹಳ್ಳಿ ಚಂದ್ರಶೇಖರ್
K Shivaram: ಕೆ ಶಿವರಾಮ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಾಗತಿಹಳ್ಳಿ ಚಂದ್ರಶೇಖರ್, ಶಿವರಾಮ್ ಅವರ ವ್ಯಕ್ತಿತ್ವದ ಬಗ್ಗೆ, ಅವರೊಟ್ಟಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಕೆ ಶಿವರಾಮ್ (K Shivaram) ಅವರನ್ನು ನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar). ಅವರ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಶಿವರಾಮ್ ನಾಯಕ ನಟನಾದರು. ಶಿವರಾಮ್ ಅವರೊಟ್ಟಿಗೆ ನಾಗತಿಹಳ್ಳಿ ಅವರಿಗೆ ಉತ್ತಮ ಗೆಳೆತನವಿತ್ತು. ಶಿವರಾಮ್ ಅವರು ಆಡಳಿತಾಧಿಕಾರಿಯಾಗಿದ್ದಾಗ ಅವರನ್ನು ಹತ್ತಿರದಿಂದ ನಾಗತಿಹಳ್ಳಿ ಕಂಡಿದ್ದರು. ಆ ಬಳಿಕವೂ ಅವರೊಟ್ಟಿಗೆ ಸಂಪರ್ಕ ಹೊಂದಿದ್ದರು. ಟಿವಿ9 ಜೊತೆ ಮಾತನಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ‘ಶಿವರಾಮ್ ಅವರಿಗೆ ಎರಡು ಮುಖವಿತ್ತು. ಅಭಿವ್ಯಕ್ತಿಗಾಗಿ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅದನ್ನು ಬಳಸಿಕೊಂಡಿದ್ದು ಹಾಗೂ ತಮಗಿದ್ದ ಅಧಿಕಾರದ ಮೂಲಕ ಬಡವರಿಗೆ, ದಲಿತರಿಗೆ ನೆರವಾಗುತ್ತಿದ್ದಿದ್ದು, ಇವನ್ನು ಈಗಿನ ದಲಿತ ಯುವಕರು ಗಮನಿಸಬೇಕು, ಅಳವಡಿಸಿಕೊಳ್ಳಬೇಕು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 29, 2024 11:18 PM
Latest Videos