ಬೆಂಗಳೂರು ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ​

Updated on: Nov 12, 2025 | 3:51 PM

ಬೆಂಗಳೂರು ಸಂಚಾರಿ ಪೊಲೀಸರು 'ಒಂದು ದಿನ ಪೊಲೀಸ್' ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. 18 ವರ್ಷ ಮೇಲ್ಪಟ್ಟವರು ಸಂಚಾರಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಅವರ ಕಷ್ಟಗಳನ್ನು ಅರ್ಥಮಾಡಿಕೊಳ್ಳಬಹುದು. ಬಿಸಿಲು, ಹೊಗೆ ನಡುವೆ ಸುಗಮ ಸಂಚಾರಕ್ಕೆ ಶ್ರಮಿಸುವ ಪೊಲೀಸರ ಸೇವೆ ಹಾಗೂ ನಗರ ಸಂಚಾರ ನಿರ್ವಹಣೆಯಲ್ಲಿ ತಮ್ಮ ಕೊಡುಗೆ ನೀಡಲು ಇದು ಉತ್ತಮ ಅವಕಾಶ. ವಿಡಿಯೋ ನೋಡಿ ನೋಂದಾಯಿಸಿ.

ಬೆಂಗಳೂರು, ನವೆಂಬರ್​​ 12: ಹಗಲು-ರಾತ್ರಿ ಎನ್ನದೆ ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಉರಿ ಬಿಸಿಲು, ವಾಹನಗಳ ಹೊಗೆ ಮಧ್ಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಗಂಟೆಗಟ್ಟಲೇ ನಿಂತುಕೊಂಡು ಕೆಲಸ ಮಾಡುವ ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಜನಸಾಮಾನ್ಯರಿಗೂ ಸಂಚಾರಿ ಪೊಲೀಸರ ಕಷ್ಟವೇನು ಎಂದು ತಿಳಿಸುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸ್​​ ನೂತನ ಉಪಕ್ರಮಕ್ಕೆ ಕೈಹಾಕಿದ್ದಾರೆ. 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ‘ಒಂದು ದಿನ’ದ ಮಟ್ಟಿಗೆ ಸಂಚಾರಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Nov 12, 2025 03:31 PM
Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More