ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ
ವರದಕ್ಷಿಣೆ ಕಿರುಕುಳದಿಂದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಬೆಂಗಳೂರಿನ ಯಡಿಯೂರಿನಲ್ಲಿ ಕೇಳಿಬಂದಿದೆ. ಮದುವೆಯಾಗಿ ಎರಡು ವರ್ಷಗಳಲ್ಲೇ ಯುವತಿ ಪ್ರಾಣ ಕಳೆದುಕೊಂಡಿದ್ದು, ಪತಿ ವಿರುದ್ಧ ಯುವತಿ ಪೋಷಕರು ಆರೋಪ ಮಾಡಿದ್ದಾರೆ. ಮದುವೆಯ ಸಮಯದಲ್ಲಿ ಸಾಕಷ್ಟು ವರದಕ್ಷಿಣೆಯನ್ನು ನೀಡಿ, ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೂ, ಹಣದ ಆಸೆಯಿಂದ ಪದೇ ಪದೇ ವರದಕ್ಷಿಣೆಗಾಗಿ ಮಗಳಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು, ಜನವರಿ 26: 2 ವರ್ಷಗಳ ಹಿಂದೆ ಮದುವೆ ಆಗಿದ್ದ ಮಹಿಳೆಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕೀರ್ತಿ ಮೃತ ಮಹಿಳೆಯಾಗಿದ್ದು, ವರದಕ್ಷಿಣೆ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಕಳೆದ 2 ತಿಂಗಳಿಂದ ಕಿರುಕುಳದ ಬಗ್ಗೆ ತಾಯಿ ಬಳಿ ಕೀರ್ತಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಪತ್ನಿ ಪೋಷಕರಿಗೆ ಪತಿ ಗುರುಪ್ರಸಾದ್ ಮಾಹಿತಿ ನೀಡಿದ್ದ ಎನ್ನಲಾಗಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. 2023ರ ನವೆಂಬರ್ನಲ್ಲಿ ಕೀರ್ತಿ, ಗುರುಪ್ರಸಾದ್ ಮದುವೆ ಆಗಿತ್ತು. ಸುಮಾರು 30-35 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದರೂ, 2025ರ ಡಿಸೆಂಬರ್ನಲ್ಲಿ ಮತ್ತೆ 10 ಲಕ್ಷ ಹಣವನ್ನು ಗುರುಪ್ರಸಾದ್ ಕೇಳಿದ್ದ. ಮನೆ ಕಟ್ಟಿಸುವುದಕ್ಕೆ ಹಣ ಕೊಡಿ ಎಂದಿದ್ದರಿಂದ ಕೀರ್ತಿ ಪೋಷಕರು 8 ಲಕ್ಷ ನೀಡಿದ್ದರು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
