Driverless Metro: ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಟ್ರಯಲ್ ರನ್ ಆರಂಭ
ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದೆ. ನಿನ್ನೆಯಿಂದ ಸಿಗ್ನಲಿಂಗ್ ಪರೀಕ್ಷೆ ನಡೆಯುತ್ತಿದೆ. ಈ ನಡುವೆ, ಬಿಎಂಆರ್ಸಿಎಲ್ನ ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಾರ್ಥ ಸಂಚಾರ ಆರಂಭಗೊಂಡಿದೆ. ಗುರುವಾರ ಸಂಜೆಯಿಂದ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ. ಹಳದಿ ಮಾರ್ಗ ಅಂದರೆ, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಚಲಿಸುವ ರೈಲು ಇದಾಗಿದೆ.
ಬೆಂಗಳೂರು, ಮಾ.8: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದೆ. ನಿನ್ನೆಯಿಂದ ಸಿಗ್ನಲಿಂಗ್ ಪರೀಕ್ಷೆ ನಡೆಯುತ್ತಿದೆ. ಈ ನಡುವೆ, ಬಿಎಂಆರ್ಸಿಎಲ್ನ ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ (Bengaluru Driverless Metro) ರೈಲಿನ ಪ್ರಾಯೋಗಾರ್ಥ ಸಂಚಾರ ಗುರುವಾರ ಸಂಜೆಯಿಂದ ಹಳದಿ ಮಾರ್ಗದಲ್ಲಿ ಆರಂಭಗೊಂಡಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಚಲಿಸುವ ರೈಲು ಇದಾಗಿದೆ.
ಒಟ್ಟು 18.82 ಕಿ.ಮೀ ಇರುವ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದ್ದು, ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ರೈಲು ನಿಲ್ದಾಣಗಳಿವೆ. ಎಲ್ಲವೂ ಎತ್ತರಿಸಿದ ಮಾರ್ಗಗಳಾಗಿವೆ. ಈ ಹಿನ್ನಲೆ ನಿನ್ನೆ ಸಂಜೆಯಿಂದ ಟ್ರಯಲ್ ಆರಂಭಿಸಲಾಗಿದೆ. ಸಂಜೆ 6.55 ಕ್ಕೆ ಹೆಬ್ಬಗೋಡಿ ಡಿಪೋ IBL- 1 ರಿಂದ ಸಂಚಾರ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 6.55 ಕ್ಕೆ ವೇಗದಿಂದ ಆರಂಬಿಸಿ 25 ಕಿ.ಮೀ ಸ್ಪೀಡ್ವರೆಗೆ ಟ್ರಯನ್ ರನ್ ಮಾಡಲಾಗಿದೆ. ಅದರಂತೆ ಸಂಜೆ 7.14 ಕ್ಕೆ ಬೊಮ್ಮಸಂದ್ರ ನಿಲ್ದಾಣವನ್ನು ತಲುಪಿದೆ. ಬಿಎಂಆರ್ಸಿಎಲ್ ಇದೇ ರೀತಿ ಮೂರು ದಿನಗಳ ಕಾಲ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ರನ್ ಮಾಡಲಿದೆ.
ಇದನ್ನೂ ಓದಿ: ಬೆಂಗಳೂರಿಗೆ ನಿರಾಶೆ: ನಮ್ಮ ಮೆಟ್ರೋ ಹಳದಿ ಮಾರ್ಗ ವರ್ಷದ ಅಂತ್ಯಕ್ಕೆ ಕಾರ್ಯಾರಂಭ !
ಒಟ್ಟು 37 ಪರೀಕ್ಷೆಗಳನ್ನು ಬಿಎಂಆರ್ಸಿಎಲ್ ಮಾಡಲುದ್ದು, ಈ ಪರೀಕ್ಷೆ ಸಂಪೂರ್ಣ ಯಶಸ್ವಿಯಾದ ನಂತರ ಸಾರ್ವಜನಿಕರ ಪ್ರಯಾಣಕ್ಕೆ ಚಾಲಕ ರಹಿತ ಮೆಟ್ರೋ ರೈಲು ಲಭ್ಯವಾಗಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ