ಆಂಧ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಭೈರವಕೋಣ ಜಲಪಾತಕ್ಕೆ ಜೀವಕಳೆ

Updated on: Oct 28, 2025 | 9:19 PM

ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ನಲ್ಲಮಲ ಬೆಟ್ಟಗಳ ಬಳಿ ಇರುವ ಭೈರವಕೋಣ ಜಲಪಾತಕ್ಕೆ ಜೀವಕಳೆ ಬಂದಿದೆ. ಈ ಜಾಗ ಒಂದು ಪವಿತ್ರ ಸ್ಥಳವಾಗಿದೆ. ಈ ಸ್ಥಳವು 7 ಅಥವಾ 8ನೇ ಶತಮಾನದ ಶಿವನ 8 ವಿಭಿನ್ನ ರೂಪಗಳ ಗುಹಾ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ಶಿಲಾಶಿಲ್ಪ ಗುಹಾ ದೇವಾಲಯಗಳು ಮಹಾಬಲಿಪುರಂನಲ್ಲಿರುವ ಕೆಲವು ಶಿಲಾಶಿಲ್ಪ ದೇವಾಲಯಗಳಿಗೆ ಹೋಲುತ್ತವೆ. ಮೊಂತಾ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ.

ಹೈದರಾಬಾದ್, ಅಕ್ಟೋಬರ್ 28: ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತದಿಂದ (Cyclone Montha) ಭಾರೀ ಮಳೆ ಸುರಿಯುತ್ತಿದೆ, ಭೂಕುಸಿತವೂ ಉಂಟಾಗಿದೆ. ಇದರಿಂದ ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ನಲ್ಲಮಲ ಬೆಟ್ಟಗಳ ಬಳಿ ಇರುವ ಭೈರವಕೋಣ ಜಲಪಾತಕ್ಕೆ ಜೀವಕಳೆ ಬಂದಿದೆ. ಈ ಜಾಗ ಒಂದು ಪವಿತ್ರ ಸ್ಥಳವಾಗಿದೆ. ಈ ಸ್ಥಳವು 7 ಅಥವಾ 8ನೇ ಶತಮಾನದ ಶಿವನ 8 ವಿಭಿನ್ನ ರೂಪಗಳ ಗುಹಾ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ಶಿಲಾಶಿಲ್ಪ ಗುಹಾ ದೇವಾಲಯಗಳು ಮಹಾಬಲಿಪುರಂನಲ್ಲಿರುವ ಕೆಲವು ಶಿಲಾಶಿಲ್ಪ ದೇವಾಲಯಗಳಿಗೆ ಹೋಲುತ್ತವೆ. ಮೊಂತಾ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ