AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಂತಾ ಚಂಡಮಾರುತದ ಅಬ್ಬರ; ವೈಜಾಗ್ ವಿಮಾನ ನಿಲ್ದಾಣದ 32 ವಿಮಾನಗಳು ರದ್ದು

ಮೊಂತಾ ಚಂಡಮಾರುತದ ಅಬ್ಬರ; ವೈಜಾಗ್ ವಿಮಾನ ನಿಲ್ದಾಣದ 32 ವಿಮಾನಗಳು ರದ್ದು

ಸುಷ್ಮಾ ಚಕ್ರೆ
|

Updated on: Oct 28, 2025 | 5:15 PM

Share

ಮೊಂತಾ ಚಂಡಮಾರುತದ ಪರಿಣಾಮವಾಗಿ ಒಡಿಶಾ 2,000ಕ್ಕೂ ಹೆಚ್ಚು ಆಶ್ರಯ ತಾಣಗಳನ್ನು ತೆರೆದಿದೆ. ಚಂಡಮಾರುತ ಮೊಂತಾದಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ನಮ್ಮ ಸರ್ಕಾರವು ಉತ್ತಮವಾಗಿ ಸಿದ್ಧವಾಗಿದೆ ಮತ್ತು ತೀವ್ರ ಚಂಡಮಾರುತದಿಂದ ಪ್ರಭಾವಿತರಾಗುವ ಸಾಧ್ಯತೆ ಇರುವ ಜನರಿಗೆ 8 ಜಿಲ್ಲೆಗಳಲ್ಲಿ 2,000ಕ್ಕೂ ಹೆಚ್ಚು ವಿಪತ್ತು ಪರಿಹಾರ ಕೇಂದ್ರಗಳನ್ನು ತೆರೆದಿದೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹೇಳಿದ್ದಾರೆ.

ಭುವನೇಶ್ವರ, ಅಕ್ಟೋಬರ್ 28: ಮೊಂತಾ ಚಂಡಮಾರುತದ (Cyclone Montha)  ಪರಿಣಾಮವಾಗಿ ಆಂಧ್ರ ಪ್ರದೇಶದಲ್ಲಿ (Andhra Pradesh) ಇಂದು ಭೂಕುಸಿತ ಉಂಟಾಗಿದೆ. ಚಂಡಮಾರುತದ ಪರಿಣಾಮದಿಂದ ಇಂದು ವಿಶಾಖಪಟ್ಟಣಂ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 32 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಕ್ಟೋಬರ್ 27ರಂದು 2 ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.

ಸೋಮವಾರ ರದ್ದಾದ ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಹೊರತುಪಡಿಸಿ, ಉಳಿದ 30 ವಿಮಾನಗಳು ಅಕ್ಟೋಬರ್ 27ರಂದು ಕಾರ್ಯಾಚರಣೆ ನಡೆಸಿದ್ದವು. ವಿಜಯವಾಡ ವಿಮಾನ ನಿಲ್ದಾಣ ಕೂಡ ಇಂದು 16 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ನಿನ್ನೆ (ಸೋಮವಾರ) ವೈಜಾಗ್‌ಗೆ ಕೇವಲ ಒಂದು ವಿಮಾನವನ್ನು ರದ್ದುಗೊಳಿಸಲಾಗಿತ್ತು. ಇಂದು ದೇಶಾದ್ಯಂತ ದೆಹಲಿ, ಮುಂಬೈ ಸೇರಿದಂತೆ ವಿವಿಧ ಸ್ಥಳಗಳಿಗೆ 16 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ