AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyclone Montha: ಮೊಂಥಾ ಚಂಡಮಾರುತಕ್ಕೆ ಈ ಹೆಸರಿಟ್ಟಿದ್ದು ಯಾರು, ಮೊಂಥಾ ಅರ್ಥವೇನು?

ಇಂದು ಆಂಧ್ರದ ಕರಾವಳಿಗೆ ಮೊಂಥಾ ಚಂಡಮಾರುತ ಬಂದು ಅಪ್ಪಳಿಸಲಿದೆ. ಹಾಗಾದರೆ ಈ ಚಂಡಮಾರುತಕ್ಕೆ ಮೊಂಥಾ ಎಂದು ಹೆಸರಿಟ್ಟವರು ಯಾರು, ಅದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ. ಮೊಂಥಾ ಚಂಡಮಾರುತದ ಹೆಸರು ಅದರ ಸ್ವಭಾವಕ್ಕೆ ಹೊಂದಿಕೆಯಾಗುವುದಿಲ್ಲ. ಈ ಚಂಡಮಾರುತಕ್ಕೆ ಮೊಂಥಾ ಎಂದು ಥೈಲೆಂಡ್ ನಾಮಕರಣ ಮಾಡಿದೆ. ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ ‘ಪರಿಮಳಯುಕ್ತ ಹೂವು’ ಎಂದರ್ಥ.

Cyclone Montha: ಮೊಂಥಾ ಚಂಡಮಾರುತಕ್ಕೆ ಈ ಹೆಸರಿಟ್ಟಿದ್ದು ಯಾರು, ಮೊಂಥಾ ಅರ್ಥವೇನು?
ಮೊಂಥಾImage Credit source: PTI
ನಯನಾ ರಾಜೀವ್
|

Updated on: Oct 28, 2025 | 10:17 AM

Share

ನವದೆಹಲಿ, ಅಕ್ಟೋಬರ್ 28: ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ‘ಮೊಂಥಾ’ ಚಂಡಮಾರುತ(Montha Cyclone)ದ ಪರಿಣಾಮಗಳು ಇಂದಿನಿಂದ ಗೋಚರಿಸಲು ಪ್ರಾರಂಭವಾಗಿದೆ.. ಇಂದು ಸಂಜೆ ವೇಳೆಗೆ ಆಂಧ್ರಪ್ರದೇಶದ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತವು ಭೂಕುಸಿತವನ್ನು ಉಂಟುಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗಾದರೆ ಈ ಚಂಡಮಾರುತಕ್ಕೆ ಮೊಂಥಾ ಎಂದು ಹೆಸರಿಟ್ಟವರು ಯಾರು, ಅದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ. ಮೊಂಥಾ ಚಂಡಮಾರುತದ ಹೆಸರು ಅದರ ಸ್ವಭಾವಕ್ಕೆ ಹೊಂದಿಕೆಯಾಗುವುದಿಲ್ಲ. ಈ ಚಂಡಮಾರುತಕ್ಕೆ ಮೊಂಥಾ ಎಂದು ಥೈಲೆಂಡ್ ನಾಮಕರಣ ಮಾಡಿದೆ. ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ ‘ಪರಿಮಳಯುಕ್ತ ಹೂವು’ ಎಂದರ್ಥ.

ಆದರೆ ಇದು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ತೆಲಂಗಾಣದ ಕರಾವಳಿ ಪ್ರದೇಶಗಳಲ್ಲಿ ಸುಗಂಧ ಹರಡುವ ಹೂವಾಗಿ ಅಲ್ಲ ಬದಲಾಗಿ ಅಲ್ಲ, ಭಯ ಹಾಗೂ ಅನಿಶ್ಚಿತತೆಯನ್ನು ತಂದೊಡ್ಡುವ ಚಂಡಮಾರುತವಾಗಿ ಬರುತ್ತಿದೆ.

ಗಾಳಿಯ ವೇಗ ಗಂಟೆಗೆ 90 ರಿಂದ 100 ಕಿ.ಮೀ. ಆಗುವ ನಿರೀಕ್ಷೆಯಿದೆ. ಚಂಡಮಾರುತದ ಪ್ರಭಾವದಿಂದಾಗಿ ಅಕ್ಟೋಬರ್ 27 ಮತ್ತು 30 ರ ನಡುವೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಒಡಿಶಾ, ತಮಿಳುನಾಡು ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಮತ್ತಷ್ಟು ಓದಿ: Cyclone Montha: ಬಂತು ಬಂತು ಮೊಂಥಾ ಚಂಡಮಾರುತ, ಆಂಧ್ರ, ಒಡಿಶಾಗೆ ಹೈ ಅಲರ್ಟ್​, ಧಾರಾಕಾರ ಮಳೆಯ ಮುನ್ಸೂಚನೆ

ಕೆಲವೊಂದು ಚಂಡಮಾರುತಗಳು ಹೆಚ್ಚು ಅಪಾಯಕಾರಿಯಲ್ಲ. ಉದಾಹರಣೆಗೆ, ನವೆಂಬರ್ 2024 ರಲ್ಲಿ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಚಂಡಮಾರುತವನ್ನು ಫೆಂಗಲ್ ಎಂದು ಹೆಸರಿಸಲಾಯಿತು. ಅದರ ಅರ್ಥ ಉದಾಸೀನ್ ಅದು ಅರೇಬಿಕ್ ಭಾಷೆಯಿಂದ ಬಂದಿದೆ. ಕತಾರ್ ಅಕ್ಟೋಬರ್ 2024 ರ ಚಂಡಮಾರುತವನ್ನು ಡಾನಾ ಎಂದು ಹೆಸರಿಸಿತು, ಇದರರ್ಥ ಔದಾರ್ಯ. ಆಗಸ್ಟ್ 2024 ರಲ್ಲಿ ಅರೇಬಿಯನ್ ಸಮುದ್ರದಲ್ಲಿ ರೂಪುಗೊಂಡ ಚಂಡಮಾರುತವನ್ನು ಅಸ್ನಾ ಎಂದು ಪಾಕಿಸ್ತಾನ ಕರೆಯಿತು. ಅದರರ್ಥ ಪ್ರಶಂಸನೀಯ ಅಥವಾ ಸ್ವೀಕಾರಾರ್ಹ ಎಂದರ್ಥ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ
ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ
ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!
ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು