‘ಭಾರತ್ ಅಕ್ಕಿ’ಗಾಗಿ ಕೋಲಾರದಲ್ಲಿ ಜನರ ಕ್ಯೂ, ನೂಕುನುಗ್ಗಲು; ಇಲ್ಲಿದೆ ವಿಡಿಯೋ
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಭಾರತ್ ಅಕ್ಕಿ(bharat brand rice) ಪಡೆಯಲು ಜನರು ಮುಗಿಬಿದ್ದ ಘಟನೆ ನಡೆದಿದೆ. ಇಂದು ಕೋಲಾರ (Kolar) ನಗರದ ಡೂಂ ಲೈಟ್ ಸರ್ಕಲ್‌ನಲ್ಲಿ ಭಾರತ್ ಅಕ್ಕಿ ವಿತರಣೆ ಮಾಡಲಾಗಿದ್ದು, ಜನರು ಅಕ್ಕಿ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ನೂಕು ನುಗ್ಗಲು ಏರ್ಪಟ್ಟಿದೆ.
ಕೋಲಾರ, ಫೆ.10: ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ (Bharat Brand Rice)ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಫೆಬ್ರವರಿ 06 ರಂದು ಚಾಲನೆ ನೀಡಿದ್ದರು. ಅದರಂತೆ ‘ಭಾರತ್’ ಅಕ್ಕಿಗಾಗಿ ಕೋಲಾರದ ಡೂಂ ಲೈಟ್ ಸರ್ಕಲ್‌ನಲ್ಲಿ ಬಿಜೆಪಿಯಿಂದ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ಹಿನ್ನಲೆ ಅಕ್ಕಿಗಾಗಿ ಜನರ ಕ್ಯೂ ನಿಂತಿದ್ದು, ನೂಕುನುಗ್ಗಲು ಏರ್ಪಟ್ಟಿದೆ. ಪ್ರತಿ ಕೆ.ಜಿ.ಗೆ 29 ರೂ.ನಂತೆ 10 ಕೆ.ಜಿ ಅಕ್ಕಿಯ ಬ್ಯಾಗ್ ವಿತರಣೆ ಮಾಡಲಾಗುತ್ತಿದ್ದು, ಕಡಿಮೆ ದರದ ‘ಭಾರತ್’ ಅಕ್ಕಿ ಪಡೆಯಲು ಜನರ ಹರಸಾಹಸ ಪಡುವಂತಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos

ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ

ಕರ್ನಾಟಕ ಬಂದ್ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ

KSRTC ಬಸ್ ಮುಂದೆ ಡೆಲಿವರಿ ಬಾಯ್ ರ್ಯಾಷ್ ಡ್ರೈವ್: ದಾರಿ ಬಿಡದೆ ಹುಚ್ಚಾಟ
