ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್ ನೋಡಲು ಬಂದ ಭವಾನಿ ರೇವಣ್ಣ, ವಿಡಿಯೋ ನೋಡಿ
ನಟ ದರ್ಶನ್ನನ್ನು ನೋಡಲು ಅವರ ಕುಟುಂಬ ಬಂದ ಬೆನ್ನಲ್ಲೇ ಇತ್ತ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಭೇಟಿಯಾಗಲು ತಾಯಿ ಭವಾನಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ಸ್ಟಿಕ್ ಹಿಡಿದುಕೊಂಡು ಕುಂಟುತ್ತ ಮಗನನ್ನು ನೋಡಲು ಬಂದಿದ್ದಾರೆ. ಆದ್ರೆ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಅವರ ಪರಪ್ಪನ ಅಗ್ರಹಾರ ಜೈಲಿಗೆ ಬಂದಿರುವುದನ್ನು ವಿಡಿಯೋನಲ್ಲಿ ನೋಡಿ.
ಬೆಂಗಳೂರು, (ಜುಲೈ 01): ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ನೋಡಲು ಅವರ ತಾಯಿ ಭವಾನಿ ರೇವಣ್ಣ ಅವರನ್ನು ಆಗಮಿಸಿದ್ದಾರೆ. ಜೈಲಿನಲ್ಲಿರುವ ಮಗ ಭೇಟಿಗೆ ಕಾರ್ ಡ್ರೈವರ್ ಮತ್ತು ಪಿಎ ಜೊತೆಗೆ ಆಗಮಿಸಿದ್ದಾರೆ. ಕಾಲಿಗೆ ಪೆಟ್ಟಾಗಿ ಕುಂಟುತ್ತಲೇ ಮಗನನ್ನ ನೋಡಲು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಬಂದಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ಓಡಾಡಲು ಆಗದೆ ಇದ್ದರೂ ಸಹ ಸ್ಟಿಕ್ ಆಸರೆಯೊಂದಿಗೆ ಮಗನ ನೋಡಲು ಬಂದಿದ್ದಾರೆ. ಜೈಲಿನಲ್ಲಿ ಮಗನನ್ನು ಭೇಟಿ ಮಾಡಿ ಸ್ವಲ್ಪ ಹೊತ್ತಿನ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಿರ್ಗಮಿಸಿದರು. ಆದ್ರೆ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಭವಾನಿ ರೇವಣ್ಣ ಅವರನ್ನು ನೋಡಿದರೆ ಮಕ್ಕಳ ಪ್ರಕರಣಗಳಿಂದ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿರುವಂತೆ ಕಂಡುಬಂದಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
