ಬಂಡೀಪುರ ಅರಣ್ಯದಲ್ಲಿ ಭೀಮನ ದರ್ಬಾರ್: ಹುಕುಂ ಟೈಗರ್ ಕಾ ಹುಕುಂ
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಈ ಸಂರಕ್ಷಿತಾರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಫಾರಿ ನಡೆಸಿದ್ದರು. ಇಂತಹ ಪ್ರವಾಸಿಗರ ಹಾಟ್ ಫೇವರೆಟ್ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಭೀಮನ ದರ್ಬಾರ್ ಶುರುವಾಗಿದೆ. ಯಾರೂ ಈ ಭೀಮ ಈತನಿಗೆ ಪ್ರವಾಸಿಗರು ಯಾಕೆ ಫಿದಾ ಆಗಿದ್ದಾರೆ.
ಚಾಮರಾಜನಗರ, ಫೆಬ್ರವರಿ 02: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಂದರೆ ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ. ಪ್ರಿನ್ಸ್ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೆ ಹತ್ತಿರಕ್ಕೆ ಬರುತ್ತಿತ್ತು. ಸಫಾರಿಗೆ ಹೋದ ಪ್ರವಾಸಿಗರಿಗೆ ಗಂಟೆಗಟ್ಟಲೆ ದರ್ಶನ ಕೊಡುತ್ತಿತ್ತು. ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿತ್ತು. ಈಗ ಪ್ರಿನ್ಸ್ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರಿನ್ಸ್ ಬಳಿಕ ಅನೇಕ ಹುಲಿಗಳು ಬಂಡೀಪುರ ಸಫಾರಿ ಏರಿಯಾದಲ್ಲಿ ಕಂಡಬಂದರೂ ಕೂಡ ಹುಲಿ ದರ್ಶನ ಸಂಪೂರ್ಣ ಕಡಿಮೆಯಾಗಿತ್ತು. ಆದರೆ, ಪ್ರಿನ್ಸ್ ಹುಲಿಯ ಸ್ಥಾನ ತುಂಬುತ್ತಿರುವುದೇ ಈ ಭೀಮ.
Published on: Feb 02, 2025 10:20 AM
Latest Videos