ಚಾಮರಾಜನಗರ: ಬಂಡೀಪುರ ಊಟಿ ಮಾರ್ಗದಲ್ಲಿ ಒಂಟಿ ಸಲಗದ ಕಾಟಕ್ಕೆ ಥಂಡಾ ಹೊಡೆದ ವಾಹನ ಸವಾರರು!
ಬಂಡಿಪುರ ಮತ್ತು ಊಟಿ ಮಾರ್ಗದಲ್ಲಿ ದಿನನಿತ್ಯ ಒಂಟಿ ಸಲಗ ಒಂದು ವಾಹನ ಸವಾರರಿಗೆ ಕಾಟ ಕೊಡುತ್ತಿದೆ. ಗೂಡ್ಸ್ ವಾಹನಗಳು, ತರಕಾರಿ ಕೊಂಡೊಯ್ಯುವ ವಾಹನಗಳನ್ನೇ ಗುರಿಯಾಗಿಸಿ ಕಾಡಾನೆ ದಾಳಿ ಮಾಡುತ್ತಿದೆ. ಇದರಿಂದಾಗಿ ನಿತ್ಯ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ. ಕಾಡಾನೆ ಉಪಟಳದ ವಿಡಿಯೋ ಇಲ್ಲಿದೆ ನೋಡಿ.
ಚಾಮರಾಜನಗರ, ಫೆಬ್ರವರಿ 2: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಊಟಿ ಮಾರ್ಗ ಮದ್ಯೆ ಬಂದು ಠಿಕಾಣಿ ಹೊಡುವ ಗಜರಾಜನಿಂದಾಗಿ , ಪ್ರವಾಸಿಗರು ಗೂಡ್ಸ್ ವಾಹನದ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ದಿನ ನಿತ್ಯ ಸಂಜೆ ಆದರೆ ಸಾಕು ರಸ್ತೆಗೆ ಬಂದು ದಾಂಗುಡಿ ಇಡುತ್ತಿರುವ ಒಂಟಿ ಸಲಗ ತರಕಾರಿ, ಕ್ಯಾರೆಟ್ ಬೆಲ್ಲ ಹೊತ್ತೊಯ್ಯುವ ವಾಹನಗಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿದೆ.
ದಿನ ನಿತ್ಯ ಈ ಒಂಟಿ ಸಲಗದ ಕಣ್ಣು ತಪ್ಪಿಸಿಕೊಂಡು ಹೋಗಲು ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯಿಂದ ಆನೆಯನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಕೂಡ ಹರಸಾಹಸ ಪಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
