ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ 100 ಎಕರೆ ಜಾಗ ಆರೋಪ: ಎಂ.ಬಿ. ಪಾಟೀಲ್‌ ವಿರುದ್ಧ ಮಾನಹಾನಿ ಮೊಕದ್ದಮೆ ಎಚ್ಚರಿಕೆ ಕೊಟ್ಟ ನಿಖಿಲ್​

Edited By:

Updated on: Jun 24, 2026 | 11:25 AM

Bengaluru Suddi: ಬಿಡದಿ ಭೂಮಿ ವಿವಾದ ತಾರಕಕ್ಕೇರಿದ್ದು, ಪೋಸ್ಟರ್‌ ಸಮರ ಆರಂಭವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪೋಸ್ಟರ್‌ ಅಂಟಿಸಿದವರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕೆಂಡಕಾರಿದ್ದಾರೆ. ಕುಮಾರಸ್ವಾಮಿ ಪತ್ನಿಯ ಹೆಸರಿನಲ್ಲಿ 100 ಎಕರೆ ಜಾಗವಿದೆ ಎಂಬ ಎಂಬಿ ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರೋಪ ಸಾಬೀತುಪಡಿಸ ಬೇಕು ಅಥವಾ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಜೂನ್​​ 24: ಬಿಡದಿ ಭೂಮಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಈ ನಡುವೆ ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ 100 ಎಕರೆ ಜಾಗ ಆರೋಪ ಮಾಡಿರುವ ಸಚಿವ ಎಂ.ಬಿ. ಪಾಟೀಲ್​​ ವಿರುದ್ಧ ಜೆಡಿಎಸ್​​ ಯುವ ಮುಖಂಡ ನಿಖಿಲ್​​ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಎಂಬಿ ಪಾಟೀಲ್‌ರನ್ನು ಗೌರವಾನ್ವಿತ ಮತ್ತು ವಿದ್ಯಾವಂತ ಸಚಿವರು ಎಂದು ತಿಳಿದಿದ್ದೆ. ಕುಮಾರಸ್ವಾಮಿ ಅವರ ಪತ್ನಿಯ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಅವರು ಸಾಬೀತುಪಡಿಸಬೇಕು. ಆಗದಿದ್ದರೆ ಅವರು ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಮಾನಹಾನಿ ಮೊಕದ್ದಮೆ ಹೂಡಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಬಾಯಿಗೆ ಬಂದಂತೆ ನೂರಾರು ಎಕರೆ ಜಾಗವಿದೆ ಎಂದು ಸುಳ್ಳು ಆರೋಪ ಮಾಡಬಾರದು. ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಎಂಬಿ ಪಾಟೀಲ್‌ ವಿರುದ್ಧ ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 24, 2026 11:25 AM
Follow Us