Indian Flag: ಜೈಸಲ್ಮೇರ್ ಗಡಿಯಲ್ಲಿ ಭಾರತದ ಅತ್ಯಂತ ದೊಡ್ಡ ಖಾದಿ ರಾಷ್ಟ್ರ ಧ್ವಜ ಪ್ರದರ್ಶನ

| Updated By: shivaprasad.hs

Updated on: Jan 16, 2022 | 9:48 AM

Army Day 2022: ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆ ಸೇನಾದಿನಾಚರಣೆ ಅಂಗವಾಗಿ ಅತಿ ದೊಡ್ಡ ರಾಷ್ಟ್ರೀಯ ಧ್ವಜವನ್ನು ಪ್ರದರ್ಶಿಸಲಾಗಿದೆ.

ರಾಜಸ್ಥಾನ: ಭಾರತದಲ್ಲಿ ನಿನ್ನೆ ಅಂದರೆ ಜನವರಿ 15ರ ಶನಿವಾರ 74ನೇ ‘ಸೇನಾ ದಿನ’ವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜಸ್ಥಾನದ ಜೈಸಲ್ಮೇರ್​ನ ಲಾಂಗೆವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಖಾದಿಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜವಾದ ‘ಸ್ಮಾರಕ ರಾಷ್ಟ್ರೀಯ ಧ್ವಜ’ವನ್ನು ಪ್ರದರ್ಶಿಸಲಾಯಿತು. 1971ರ ಸಮಯದಲ್ಲಿ ಲಾಂಗೇವಾಲಾ ಕದನದ ಸ್ಥಳವಾಗಿತ್ತು. ಧ್ವಜವು ಸುಮಾರು 225 ಅಡಿ ಉದ್ದ ಮತ್ತು 150 ಅಡಿ ಅಗಲವಿದೆ.

ಲೊಂಗೆವಾಲಾದಲ್ಲಿನ ಈ ಸಾರ್ವಜನಿಕ ಪ್ರದರ್ಶನವು ಈ ಧ್ವಜದ ಐದನೇ ಪ್ರದರ್ಶನವಾಗಿದೆ. ಕಳೆದ ವರ್ಷ ಗಾಂಧಿ ಜಯಂತಿಯ ಸಂದರ್ಭದಲ್ಲಿ ಲೇಹ್‌ನಲ್ಲಿ ಈ ವಿಶೇಷ ಧ್ವಜದ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಎರಡನೇ ಸಾರ್ವಜನಿಕ ಪ್ರದರ್ಶನವು 8ನೇ ಅಕ್ಟೋಬರ್ 2021 ರಂದು ವಾಯುಪಡೆ ದಿನದಂದು ಹಿಂಡನ್ ವಾಯುನೆಲೆಯಲ್ಲಿ ನಡೆಯಿತು. ಅಕ್ಟೋಬರ್ 21 ರಂದು ಕೆಂಪು ಕೋಟೆಯಲ್ಲಿ ರಾಷ್ಟ್ರವು 100 ಕೋಟಿ ಕೋವಿಡ್ -19 ಲಸಿಕೆಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮೂರನೇ ಪ್ರದರ್ಶನ ನಡೆದಿತ್ತು. ಡಿಸೆಂಬರ್ 4 ರಂದು, ನೌಕಾಪಡೆಯ ದಿನದಂದು ಗೇಟ್‌ವೇ ಆಫ್ ಇಂಡಿಯಾ ಬಳಿಯೂ ಧ್ವಜವನ್ನು ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ:

Indian Army Day 2022: 74ನೇ ಸೇನಾ ದಿನದ ಶುಭಾಶಯ ಸಲ್ಲಿಸಿದ ಪ್ರಧಾನಿ ಮೋದಿ; ಈ ವಿಶೇಷ ದಿನದ ಇತಿಹಾಸವೇನು? ಇಲ್ಲಿದೆ ಮಾಹಿತಿ

ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಭಾರತೀಯ ಸೈನಿಕರು; ಇಲ್ಲಿವೆ ಮೈ ನವಿರೇಳಿಸುವ ಫೋಟೋಗಳು