ಆನೆ, ಹುಲಿ, ಸಿಂಹ ಪಳಗಿಸಿದರೆ ಸೌಮ್ಯ ಸ್ವಭಾವ ಧರಿಸಿಕೊಳ್ಳುತ್ತವೆ, ಹಾಗಾಗಿ ನಾನೊಬ್ಬ ಪಳಗಿದ ಹುಲಿ: ಎಮ್ ಪಿ ರೇಣುಕಾಚಾರ್ಯ

ಹೊನ್ನಾಳಿ ಯುವಜನತೆ ಮತ್ತು ಬೆಂಬಲಿಗರು ತಮ್ಮನ್ನು ಹೊನ್ನಾಳಿ ಹುಲಿ, ಸಿಂಹ ಅಂತ ಕರೆಯುತ್ತಾರೆ, ಆದರೆ ತಾನೊಬ್ಬ ಸಾಮಾನ್ಯ ವ್ಯಕ್ತಿ ಅಂತ ಹೇಳಿದರು. ಹಾಗೆ ನೋಡಿದರೆ ಹುಲಿ, ಸಿಂಹ, ಆನೆ ಮೊದಲಾದವೆಲ್ಲ ಸೌಮ್ಯ ಸ್ವಾಭಾವದ ಪ್ರಾಣಿಗಳು. ಅವುಗಳನ್ನು ಪಳಗಿಸಿದರೆ ಸೌಮ್ಯ ಸ್ವಭಾವ ಧರಿಸಿಕೊಳ್ಳುತ್ತವೆ ಎಂದು ಹೇಳಿ ತಾನೊಬ್ಬ ಪಳಗಿದ ಹುಲಿ ಅಂದರು

ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ (Basavaraj Bommai) ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಶನಿವಾರ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಕಾಂಗ್ರೆಸ್ ನಾಯಕರ ಬಗ್ಗೆ ಕಿಡಿಕಾರಿದರು. ತನಗೆ ಯಾವತ್ತೂ ಗಾಳಿಯಲ್ಲಿ ಮಾತಾಡಿ ಅಭ್ಯಾಸವಿಲ್ಲ, ಆಡಿದ ಮಾತಿಗೆ ಬದ್ಧನಾಗಿರುತ್ತೇನೆ ಅಂದ ಅವರು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ವಿರುದ್ಧ ಮಾಡಿದ ಕಾಮೆಂಟ್ಗಳಿಗೆ ಮಾಧ್ಯಮಗಳ ಮೂಲಕ ಬೇಷರತ್ ಕ್ಷಮೆ ಕೇಳಿದರೂ ಕಾಂಗ್ರೆಸ್ ನಾಯಕರು ಕೇಸ್ ದಾಖಲಿಸುವ ಬಗ್ಗೆ ಮಾತಾಡಿ ದುರಹಂಕಾರ ಮೆರೆಯುತ್ತಿದ್ದಾರೆ, ಇದು ಅವರ ಭಂಡತನ ಎಂದರು. ತಾವು ಕ್ಷಮೆ ಕೇಳಿದ ಹಾಗೆ ಅವರು ಸಹ ಬೇಷರತ್ ಕ್ಷಮೆ ಕೇಳಬೇಕು ಎಂದು ಅವರು ಹೇಳಿದರು.

ತಾನು ಯಾವತ್ತೂ ಹುಲಿ, ಸಿಂಹ, ಕರಡಿ ಎಂದು ಹೇಳಿಕೊಂಡಿಲ್ಲ ಎಂದ ಶಾಸಕರು ಹೊನ್ನಾಳಿ ಯುವಜನತೆ ಮತ್ತು ಬೆಂಬಲಿಗರು ತಮ್ಮನ್ನು ಹೊನ್ನಾಳಿ ಹುಲಿ, ಸಿಂಹ ಅಂತ ಕರೆಯುತ್ತಾರೆ, ಆದರೆ ತಾನೊಬ್ಬ ಸಾಮಾನ್ಯ ವ್ಯಕ್ತಿ ಅಂತ ಹೇಳಿದರು. ಹಾಗೆ ನೋಡಿದರೆ ಹುಲಿ, ಸಿಂಹ, ಆನೆ ಮೊದಲಾದವೆಲ್ಲ ಸೌಮ್ಯ ಸ್ವಾಭಾವದ ಪ್ರಾಣಿಗಳು. ಅವುಗಳನ್ನು ಪಳಗಿಸಿದರೆ ಸೌಮ್ಯ ಸ್ವಭಾವ ಧರಿಸಿಕೊಳ್ಳುತ್ತವೆ ಎಂದು ಹೇಳಿ ತಾನೊಬ್ಬ ಪಳಗಿದ ಹುಲಿ ಅಂದರು.

ರಾಜಕೀಯ ನಾಯಕರು ಯಾವುದೇ ಪಕ್ಷದವರಾಗಿರಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಕಾನೂನಿನ ಮುಂದೆ ತಲೆಬಾಗಲೇ ಬೇಕು. ನಾಡಿನ ಕಾನೂನನ್ನು ಗೌರವಿಸುವ ವ್ಯಕ್ತಿ ತಾನು ಎಂದು ರೇಣುಕಾಚಾರ್ಯ ಪುನರುಚ್ಛರಿಸಿದರು.

ಇದನ್ನೂ ಓದಿ:   ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ

Click on your DTH Provider to Add TV9 Kannada