ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಕೇಬಲ್ ಚಾನೆಲ್ ಸೆಟ್ ಅಪ್ ಮಾಡಿ ಕೊಡೋದಾಗಿ ಹೇಳಿ ವಂಚನೆ ಮಾಡಿದ್ದಾಗಿ ತಿಳಿದು ಬಂದಿದೆ. ಗೋಲ್ಡ್ ಸುರೇಶ್ ಆದರೂ ಹಣ ವಾಪಸ್ ನೀಡದೆ ಅವರು ಸತಾಯಿಸುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗೋಲ್ಡ್ ಸುರೇಶ್ (Gold Suresh) ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಸುರೇಶ್ ಅವರು ಕೇಬಲ್ ಚಾನೆಲ್ನ ಸೆಟಅಪ್ ಮಾಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ ನಾಲ್ಕು ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ ಏಳು ಲಕ್ಷ ರೂಪಾಯಿನ ಸುರೇಶ್ಗೆ ಮೈನುದ್ದೀನ್ ನೀಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಈಗ ಅವರು ಹಣವನ್ನು ಮರಳಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ ಮೈನುದ್ದೀನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 18, 2025 11:29 AM
Latest Videos