AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಸುದೇವ ಕುಟುಂಬ ಸೀರಿಯಲ್: ಮತ್ತೆ ನೆಗೆಟಿವ್ ಪಾತ್ರ ಒಪ್ಪಿಕೊಂಡ ಬಿಗ್ ಬಾಸ್ ಹಂಸ

ವಸುದೇವ ಕುಟುಂಬ ಸೀರಿಯಲ್: ಮತ್ತೆ ನೆಗೆಟಿವ್ ಪಾತ್ರ ಒಪ್ಪಿಕೊಂಡ ಬಿಗ್ ಬಾಸ್ ಹಂಸ

ಮದನ್​ ಕುಮಾರ್​
|

Updated on: Sep 09, 2025 | 6:27 PM

Share

ನಟಿ ಹಂಸಾ ಅವರು ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ತಂಡ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಂಸ ಭಾಗವಹಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಮುಗಿದು 1 ವರ್ಷ ಆದ ನಂತರ ಅವರು ಈ ಸೀರಿಯಲ್ ಒಪ್ಪಿಕೊಂಡರು. ಬಿಗ್ ಬಾಸ್ ಶೋನಿಂದ ಹಂಸಾ ಅವರ ಖ್ಯಾತಿ ಹೆಚ್ಚಾಗಿದೆ.

‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿಯಲ್ಲಿ ನಟಿ ಹಂಸಾ ಅವರು ಅಭಿನಯಿಸುತ್ತಿದ್ದಾರೆ. ಸೀರಿಯಲ್ ತಂಡ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಂಸ ಭಾಗವಹಿಸಿದ್ದರು. ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಬಳಿಕ ಹಂಸಾ (Hamsa) ಅವರ ಖ್ಯಾತಿ ಹೆಚ್ಚಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಮುಗಿದು 1 ವರ್ಷ ಆದ ಬಳಿಕ ಅವರು ಈ ಸೀರಿಯಲ್ ಒಪ್ಪಿಕೊಂಡರು. ‘ಪಾತ್ರ ಚೆನ್ನಾಗಿದೆ. ಪ್ರೊಡಕ್ಷನ್ ಹೌಸ್ ಚೆನ್ನಾಗಿದೆ. ಈ ಟೀಮ್ ಜೊತೆ ಕೆಲಸ ಮಾಡಲು ನನಗೆ ತುಂಬ ಖುಷಿ ಇದೆ. ಇದರಲ್ಲಿ ನಾನು ನೆಗೆಟಿವ್ ರೋಲ್ ಮಾಡುತ್ತಿದ್ದೇನೆ. ಅಂಥ ಪಾತ್ರಕ್ಕೆ ನಾನು ಬ್ರ್ಯಾಂಡ್ ಅಂಬಾಸಡರ್ ಆಗಿದ್ದೇನೆ. ನಿಜ ಜೀವನದಲ್ಲಿ ನಾನು ಒಳ್ಳೆಯವಳು’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.