ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ

|

Updated on: Mar 25, 2025 | 9:30 PM

ರಜತ್ ಕಿಶನ್ ಪತ್ನಿ ಅಕ್ಷಿತಾ ಅವರು ಮಾರ್ಚ್​ 24ರಂದು ಬಸವೇಶ್ವರನಗರ ಪೊಲೀಸ್​ ಠಾಣೆಗೆ ಫೈಬರ್ ಮಚ್ಚು ತಂದುಕೊಟ್ಟಿದ್ದರು. ಅದು ನಕಲಿ ಮಚ್ಚು ಎಂಬುದು ತನಿಖೆ ವೇಳೆ ಗೊತ್ತಾಯಿತು. ಅಸಲಿ ಮಚ್ಚು ಪತ್ತೆ ಮಾಡುವ ಸಲುವಾಗಿ ಮತ್ತೆ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಗಿದೆ. ವಿಚಾರಣೆಯಲ್ಲಿ ಭಾಗಿಯಾದ ಅವರು ವಾಪಸ್ ತೆರಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಮಾಜಿ ಸ್ಪರ್ಧಿ ರಜತ್ ಕಿಶನ್ (Rajath Kishan) ಮಾಡಿದ ತಪ್ಪಿಗೆ ಅವರ ಪತ್ನಿ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ. ನಿಷೇಧಿತ ಮಾರಕಾಸ್ತ್ರ ಹಿಡಿದು ವಿನಯ್ ಗೌಡ (Vinay Gowda) ಜೊತೆ ರಜತ್ ಅವರು ರೀಲ್ಸ್ ಮಾಡಿದ್ದರು. ಅವರು ಈಗ ಪೊಲೀಸರ ಅತಿಥಿ ಆಗಿದ್ದಾರೆ. ರೀಲ್ಸ್​ಗೆ ಬಳಸಿದ್ದ ಮಚ್ಚಿಗಾಗಿ ಪೊಲೀಸರು ಹುಡುಕಾಟ ನಡೆದಿದ್ದಾರೆ. ರಜತ್ ಪತ್ನಿ ಅಕ್ಷಿತಾ (Rajath Kishan wife Akshita) ಅವರು ಮಾ.24ರಂದು ಬಸವೇಶ್ವರ ನಗರ ಪೊಲೀಸ್​ ಠಾಣೆಗೆ ಫೈಬರ್ ಮಚ್ಚನ್ನು ತಂದುಕೊಟ್ಟಿದ್ದರು. ಅದು ನಕಲಿ ಮಚ್ಚು ಎಂಬುದು ತನಿಖೆಯಿಂದ ಗೊತ್ತಾಯಿತು. ರೀಲ್ಸ್​ಗೆ ಬಳಸಿದ ಅಸಲಿ ಮಚ್ಚು ಪತ್ತೆ ಮಾಡುವ ಸಲುವಾಗಿ ಅಕ್ಷಿತಾ ಅವರನ್ನು ಮತ್ತೆ ಪೊಲೀಸ್ ಠಾಣೆಗೆ ಕರೆಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.