ಬಿಗ್ ಬಾಸ್ ಮನೆಯಲ್ಲಿ ಯಯಶ್-ಗಾನವಿ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್; ಗೆಲ್ಲೋದು ಯಾರು?

Updated on: Nov 06, 2026 | 8:57 AM

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಗಮನ ಸೆಳೆದಿದೆ. ಸ್ಪರ್ಧಿಗಳಿಗೆ ಅತ್ಯಂತ ರೋಚಕವಾದ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಟಾಸ್ಕ್ ಗೆಲ್ಲೋದು ಯಾರು ಎನ್ನುವ ಕುತೂಹಲ ಮೂಡಿದೆ. ಗಾನವಿ ಹಾಗೂ ಯಶಸ್ ಮಧ್ಯೆ ಗೆಲ್ಲೋದು ಯಾರು ಎನ್ನುವ ಕುತೂಹಲ ಮೂಡಿದೆ.

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಗಾನವಿ ಹಾಗೂ ಯಶಸ್ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಸಮತೋಲನ ಕಾಯ್ದುಕೊಳ್ಳುತ್ತಲೇ ನಿಖರವಾಗಿ ಟವರ್ ನಿರ್ಮಿಸುವ ಕಠಿಣ ಟಾಸ್ಕ್‌ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಯಾರು ಗೆದ್ದು ಈ ವಾರದ ಕ್ಯಾಪ್ಟನ್ ಪಟ್ಟಕ್ಕೇರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ರೋಚಕ ಸಂಚಿಕೆಯನ್ನು ರಾತ್ರಿ 9:30 ಕ್ಕೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ 24/7 ಲೈವ್ ವೀಕ್ಷಿಸಬಹುದಾಗಿದೆ.

ಕ್ಯಾಪ್ಟನ್ಸಿ ಪಟ್ಟ ಗೆಲ್ಲುವುದು ಪ್ರತಿಯೊಬ್ಬ ಸ್ಪರ್ಧಿಗೂ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಕ್ಯಾಪ್ಟನ್ ಆದ ಸ್ಪರ್ಧಿಗೆ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ನೇರ ರಕ್ಷಣೆ ಸಿಗಲಿದೆ. ಎಲಿಮಿನೇಷನ್ ಭೀತಿಯಿಂದ ಬಚಾವ್ ಆಗಲು ಇಬ್ಬರೂ ಪ್ರಾಣಪಣಟ್ಟು ಆಡುತ್ತಿದ್ದಾರೆ. ಈ ಗೆಲುವು ಅವರ ಮುಂದಿನ ಆಟದ ಹಾದಿಯನ್ನು ಸುಲಭಗೊಳಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 06, 2026 08:56 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More