‘ಹೊರಗೆ ಹೋದ್ಮೇಲೂ ಕಾರ್ತಿಕ್​ ಸ್ನೇಹ ನನಗೆ ಬೇಡ’; ಸಂಗೀತಾ ನೇರ ನುಡಿ

Updated on: Jan 14, 2024 | 3:39 PM

‘ಕೊನೆತನಕ ಇರುವ ಫ್ರೆಂಡ್​ಶಿಪ್​ ಯಾವುದು? ಇಲ್ಲೇ ಬಿಟ್ಟು ಹೋಗುವ ಫ್ರೆಂಡ್​ಶಿಪ್​ ಯಾವುದು’ ಎಂದು ಸುದೀಪ್​ ಹೇಳಿದ್ದಕ್ಕೆ ಎಲ್ಲರೂ ನೇರ ಉತ್ತರ ನೀಡಿದ್ದಾರೆ. ‘ಕಾರ್ತಿಕ್​ ಮತ್ತು ನನ್ನ ನಡುವೆ ಫ್ರೆಂಡ್​ಶಿಪ್​ ಉಳಿದಿಲ್ಲ. ಹೊರಗೆ ಹೋದಮೇಲೆ ಕೂಡ ಅದನ್ನು ಪ್ಯಾಚಪ್​ ಮಾಡಿಕೊಳ್ಳಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ನಡುವಿನ ಸ್ನೇಹ ಹಳಸಿದೆ. ಮೊದಲು ಕ್ಲೋಸ್​ ಆಗಿದ್ದ ಅವರು ಈಗ ಬದ್ಧ ವೈರಿಗಳಂತೆ ವರ್ತಿಸುತ್ತಿದ್ದಾರೆ. ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್​ ಒಂದು ಪ್ರಶ್ನೆ ಕೇಳಿದ್ದಾರೆ. ‘ಕೊನೆತನಕ ಇರುವ ಫ್ರೆಂಡ್​ಶಿಪ್​ ಯಾವುದು? ಇಲ್ಲೇ ಬಿಟ್ಟು ಹೋಗುವ ಫ್ರೆಂಡ್​ಶಿಪ್​ ಯಾವುದು’ ಎಂದು ಸುದೀಪ್​ ಕೇಳಿದ್ದಕ್ಕೆ ಎಲ್ಲರೂ ನೇರ ಉತ್ತರ ನೀಡಿದ್ದಾರೆ. ‘ನನಗೆ ನೋವಾಗುತ್ತದೆ ಎಂಬುದು ಗೊತ್ತಿದ್ದರೂ ಕೂಡ ಕಾರ್ತಿಕ್​ ಬಂದು ನೋವು ಮಾಡುತ್ತಾರೆ. ನಮ್ಮ ಫ್ರೆಂಡ್​ಶಿಪ್​ ಉಳಿದಿಲ್ಲ. ಹೊರಗೆ ಹೋದಮೇಲೆ ಕೂಡ ಅದನ್ನು ಪ್ಯಾಚಪ್​ ಮಾಡಿಕೊಳ್ಳಲು ನಾನು ನೋಡಲ್ಲ’ ಎಂದು ಸಂಗೀತಾ ಶೃಂಗೇರಿ (Sangeetha Sringeri) ಹೇಳಿದ್ದಾರೆ. ಜನವರಿ 14ರಂದು ಈ ಸಂಚಿಕೆ ಪ್ರಸಾರ ಆಗಲಿದೆ. ‘ಕಲರ್ಸ್​ ಕನ್ನಡ’ ಜೊತೆ ‘ಜಿಯೋ ಸಿನಿಮಾ’ ಒಟಿಟಿಯಲ್ಲೂ ಉಚಿತವಾಗಿ ಶೋ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More