ಮನೆಯಿಂದ ಬಂದ ಪತ್ರ ಪಡೆಯಲು ಕಿತ್ತಾಟ, ಗೋಳಾಟ; ಬಿಕ್ಕಿಬಿಕ್ಕಿ ಅತ್ತ ಪ್ರತಾಪ್
ಡ್ರೋನ್ ಪ್ರತಾಪ್ ಅವರು ಕಳೆದ ಮೂರು ವರ್ಷಗಳಿಂದ ಕುಟುಂಬದವರ ಜೊತೆ ಮಾತನಾಡಿಯೇ ಇಲ್ಲ. ಹೀಗಾಗಿ, ಮನೆಯವರ ರಿಯಾಕ್ಷನ್ ಹೇಗಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಇತ್ತು. ನಮ್ರತಾ ಇದೇ ಅಭಿಪ್ರಾಯ ಹೊರಹಾಕಿದರು.
ಮನೆಯಿಂದ ಬಂದ ಪತ್ರ ಪಡೆಯಲು ಮೂವರು ಸದಸ್ಯರಿಗೆ ಬಿಗ್ ಬಾಸ್ ಅವಕಾಶ ನೀಡಿದರು. ಇದನ್ನು ಯಾರು ಪಡೆಯಬೇಕು ಎನ್ನುವ ಗೊಂದಲ ಏರ್ಪಟ್ಟಿತ್ತು. ಡ್ರೋನ್ ಪ್ರತಾಪ್ (Drone Prathap) ಅವರು ಕಳೆದ ಮೂರು ವರ್ಷಗಳಿಂದ ಕುಟುಂಬದವರ ಜೊತೆ ಮಾತನಾಡಿಯೇ ಇಲ್ಲ. ಹೀಗಾಗಿ, ಮನೆಯವರ ರಿಯಾಕ್ಷನ್ ಹೇಗಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಇತ್ತು. ನಮ್ರತಾ ಇದೇ ಅಭಿಪ್ರಾಯ ಹೊರಹಾಕಿದರು. ‘ಅವರಿಗೆ ಮನೆಯನ್ನು ಬಿಟ್ಟು ಅಭ್ಯಾಸ ಇದೆ. ಹೀಗಾಗಿ, ನನಗೆ ಲೆಟರ್ ನೋಡಬೇಕು’ ಎಂದು ಹಠ ಹಿಡಿದು ಕುಳಿತರು ಕಾರ್ತಿಕ್. ಅವರ ಮಾತನ್ನು ಕೇಳಿ ಕೆಲವರಿಗೆ ಶಾಕ್ ಆಯಿತು. ಪ್ರತಾಪ್ ಅವರು ಬಿಕ್ಕಿ ಬಿಕ್ಕಿ ಅತ್ತರು. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇಂದು ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ನೋಡೋಕೆ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ