ಬಿಗ್ಬಾಸ್ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
Bigg Boss Kannada season 11: ಬಿಗ್ಬಾಸ್ ಮನೆಗೆ ಹೊಸ ಸದಸ್ಯರ ಆಗಮನ ಆಗಿದೆ. ಹೊಸ ಸದಸ್ಯರು ಮನೆಯ ಸಮೀಕರಣವನ್ನು ಬದಲಾಯಿಸಿದ್ದಾರೆ. ಇದರ ನಡುವೆ ಮನೆಯಲ್ಲಿ ಮಡಿಕೆ ಒಡೆಯುವ ಟಾಸ್ಕ್ ನೀಡಲಾಗಿದೆ. ಮಡಿಕೆಯ ಜೊತೆ ಕೆಲವರ ಮನಸ್ಸುಗಳೂ ಸಹ ಒಡೆದಿವೆ.
ಬಿಗ್ಬಾಸ್ ಮನೆಗೆ ಇತ್ತೀಚೆಗಷ್ಟೆ ಇಬ್ಬರು ಹೊಸ ಸ್ಪರ್ಧಿಗಳ ಆಗಮನ ಆಗಿದೆ. ಶೋಭಾ ಶೆಟ್ಟಿ ಮತ್ತು ರಂಜಿತ್ ವೈಲ್ಡ್ ಕಾರ್ಡ್ ಪಡೆದು ಮನೆಗೆ ಬಂದಿದ್ದಾರೆ. ಇದರಿಂದ ಮನೆಯ ಆಟದ ದಿಕ್ಕು ಬದಲಾಗಿದೆ. ಮನೆಯಲ್ಲಿ ಇಷ್ಟು ದಿನ ತಾವೇ ಟಾಪ್ ಎಂದುಕೊಂಡಿದ್ದವರು ಈಗ ಸ್ವಲ್ಪ ವೀಕ್ ಆಗಿದ್ದಾರೆ. ಇದರ ನಡುವೆ ಮನೆಯಲ್ಲಿ ಮಡಿಕೆ ಒಡೆದು ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಬೆದರು ಬೊಂಬೆಯೊಂದನ್ನು ನಿಲ್ಲಿಸಿ ಅದಕ್ಕೆ ಮಣ್ಣಿನ ಮಡಿಕೆಯನ್ನು ತಲೆಯಂತೆ ಹಾಕಿ, ನಾಮಿನೇಟ್ ಮಾಡಲು ಇಚ್ಛಿಸುವವರ ಹೆಸರು ಹೇಳಿ ಮಡಿಕೆ ಒಡೆಯಬೇಕು. ಹನುಮಂತು ಧರ್ಮಣ್ಣನ ಮಡಿಕೆ ಒಡೆದರೆ, ಭವ್ಯಾ, ಹನುಮಂತನ ಮಡಿಕೆ ಒಡೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos