ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ

ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ

ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on:Nov 19, 2024 | 2:57 PM

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್ 23 ಮತ್ತು 24 ರಂದು 45ನೇ ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವ ಆಚರಿಸಲಾಗುವುದು. ಸಾಮೂಹಿಕ ಇಷ್ಟಲಿಂಗ ಪೂಜೆ, ವಿವಿಧ ಮಠಾಧೀಶರ ಚರ್ಚೆ, ನಗೆಯೋಗ ಕೂಟ ಮತ್ತು ಬಸವಕಲ್ಯಾಣದ ವಿಕಾಸದ ಕುರಿತ ಚರ್ಚೆಗಳು ನಡೆಯಲಿವೆ.

ಬೀದರ್​, ನವೆಂಬರ್​ 19: 45ನೇ ಶರಣ ಕಮ್ಮಟ (Sharan Kammat) ಮತ್ತು ಅನುಭವಮಂಟಪ ಉತ್ಸವ (Anubhavmantapa Utasva) ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣದಲ್ಲಿ (Basavakalyan) ನವೆಂಬರ್ 23 ಮತ್ತು 24 ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಅನುಭವ ಮಂಟಪದ ಅಧ್ಯಕ್ಷರು ಡಾ. ಬಸವಲಿಂಗ ಪಟ್ಟದೇವರು, ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬೀದರ್​ನಲ್ಲಿ ಸುದ್ದಿಗೋಷ್ಠಿ ನಡೆಸುವುದರ ಮೂಲಕ ಮಾಹಿತಿ ಹಂಚಿಕೊಂಡರು. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗ ಪೊಜೆ, ಲಿಂಗಾಯತ ಹೋರಾಟ ಮುದೇನು ಎಂಬ ವಿಚಾರವಾಗಿ ವಿವಿಧ ಮಠಾಧೀಶರಿಂದ ಚರ್ಚಾಕೂಟ, ನಗೆಯೋಗ ಕೂಟ, ಬಸವಕಲ್ಯಾಣ ವಿಕಾಸ ಅಂದ-ಇಂದು-ಮುಂದು ವಿಚಾರವಾಗಿ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: ಬೀದರ್ ಗುಪ್ತಲಿಂಗೇಶ್ವರ ದೇವಾಲಯ: 5 ವರ್ಷದ ಬಳಿಕ ಜಲಪಾತಕ್ಕೆ ಸೃಷ್ಟಿ, ನಂದಿ ಬಾಯಿಂದ ಹರಿಯುವ ನೀರಿಗಿದೆ ಔಷಧಿ ಗುಣ

ಶರಣ ಕಮ್ಮಟ ಅನುಭವ ಮಂಟಪ ಉತ್ಸವದಲ್ಲಿ ಇಬ್ಬರು ಸಾಧಕರಾದ ಪದ್ಮಶ್ರೀ ಪುರಷ್ಕೃತರು ಡಾ. ಕೆ.ಎನ್. ರಾಜಣ್ಣ ಅವರಿಗೆ ಪೂಜ್ಯಶ್ರೀ ಡಾ. ಚನ್ನಬಸವ ಪಟ್ಟದೇವರ ಅನುಭವಮಂಟಪ ರಾಷ್ಟ್ರೀಯ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತದೆ. ಡಾ. ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿಯನ್ನ ಗೌರವಾನ್ವಿತ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ನಾಗಮೋಹನ್ ದಾಸ್ ಅವರಿಗೆ ಕೊಟ್ಟು ಗೌರವಿಸಲಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರರಾರು ಜನರು ಬರುವ ನಿರಿಕ್ಷೇಯಿದೆ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Nov 19, 2024 02:34 PM