ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಗೆದ್ದರೆ ಬಹಳ ಖುಷಿ; ಕಾರಣ ತಿಳಿಸಿದ ನಟ ಮಿತ್ರ
ಬಿಗ್ ಬಾಸ್ ಫಿನಾಲೆ ತಲುಪಿರುವ 6 ಸ್ಪರ್ಧಿಗಳು ವಿಶೇಷ ವ್ಯಕ್ತಿತ್ವದ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಗಿಲ್ಲಿ ನಟ ಅವರು ಕಾಮಿಡಿ ಮೂಲಕ ಮನರಂಜನೆ ನೀಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ತುಳುನಾಡಿನ ವೀಕ್ಷಕರ ಬೆಂಬಲ ಪಡೆದಿದ್ದಾರೆ. ನಟ ಮಿತ್ರ ಕೂಡ ರಕ್ಷಿತಾ ಶೆಟ್ಟಿಯ ಗೆಲುವನ್ನು ನಿರೀಕ್ಷಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (Bigg Boss Kannada 12 Finale) ತಲುಪಿರುವ 6 ಸ್ಪರ್ಧಿಗಳು ವಿಶೇಷ ವ್ಯಕ್ತಿತ್ವದ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಗಿಲ್ಲಿ ನಟ ಅವರು ಕಾಮಿಡಿ ಮೂಲಕ ಮನರಂಜನೆ ನೀಡಿದ್ದಾರೆ. ರಕ್ಷಿತಾ ಶೆಟ್ಟಿ (Rakshita Shetty) ಅವರು ತುಳುನಾಡಿನ ವೀಕ್ಷಕರ ಬೆಂಬಲ ಪಡೆದಿದ್ದಾರೆ. ನಟ ಮಿತ್ರ ಕೂಡ ರಕ್ಷಿತಾ ಶೆಟ್ಟಿಯ ಗೆಲುವನ್ನು ನಿರೀಕ್ಷಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ಈ ಮೊದಲು ಯಾವುದೇ ಮನರಂಜನಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ರಕ್ಷಿತಾ ಶೆಟ್ಟಿ ಅವರಿಗೆ ಈಗ ಹೆಚ್ಚು ಬೆಂಬಲ ಸಿಗುತ್ತಿದೆ. ಆಕೆಗೆ ಸಾಮಾಜಿಕ ಕಳಕಳಿ ಇದೆ. ಹುಲಿಕುಣಿತದ ಬಗ್ಗೆ ಅವರು ಮಾತನಾಡಿದ್ದು ಇಷ್ಟ ಆಯಿತು. ಚಿಕ್ಕ ವಯಸ್ಸಿನಲ್ಲಿ ಆಕೆಗೆ ಅಷ್ಟು ಪ್ರಬುದ್ಧತೆ ಇದೆ. ಬಿಗ್ ಬಾಸ್ನಲ್ಲಿ ಗಿಲ್ಲಿ (Gilli Nata) ಒಂದು ತೂಕ ಆದರೆ ರಕ್ಷಿತಾ ಇನ್ನೊಂದು ತೂಕ. ನಮ್ಮ ಮನೆಯಲ್ಲಿ ನಾವು ಆಕೆಗೆ ಸಪೋರ್ಟ್ ಮಾಡುತ್ತೇವೆ’ ಎಂದು ಮಿತ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
