Bigg Boss Kannada Winner: ಗಿಲ್ಲಿ ನಟ ಗೆದ್ದಾಯಿತು; ತೀರ್ಪು ನೀಡಿದ ‘ಬಿಗ್ ಬಾಸ್ ಕನ್ನಡ 12’ ವೀಕ್ಷಕರು
Bigg Boss Kannada Finale: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಇಂದು (ಜ.18) ನಡೆಯಲಿದೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಮ್ಯೂಟೆಂಟ್ ರಘು, ಗಿಲ್ಲಿ ನಟ ಅವರು ಫಿನಾಲೆ ತಲುಪಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ ಇಂದು ರಾತ್ರಿ ಘೋಷಿಸಲಿದ್ದಾರೆ. ಆದರೆ ಸುದೀಪ್ ಹೇಳುವುದಕ್ಕೂ ಮುನ್ನವೇ ವೀಕ್ಷಕರು ಭವಿಷ್ಯ ನುಡಿದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (BBK 12 Finale) ಇಂದು (ಜನವರಿ 18) ಅದ್ದೂರಿಯಾಗಿ ನಡೆಯಲಿದೆ. ಈ ಸೀಸನ್ನಲ್ಲಿ 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಂತಿಮವಾಗಿ 6 ಸ್ಪರ್ಧಿಗಳು ಫಿನಾಲೆಗೆ ಬಂದರು. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ (Gilli Nata) ಅವರು ಫಿನಾಲೆ ತಲುಪಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ ಅವರು ಇಂದು ರಾತ್ರಿ ಘೋಷಿಸಲಿದ್ದಾರೆ. ಆದರೆ ಸುದೀಪ್ ಹೇಳುವುದಕ್ಕೂ ಮುನ್ನವೇ ವೀಕ್ಷಕರು ಭವಿಷ್ಯ ನುಡಿದಿದ್ದಾರೆ. ಫಿನಾಲೆ ಝಲಕ್ ತೋರಿಸುವ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಅದಕ್ಕೆ ಕಮೆಂಟ್ ಮಾಡಿರುವ ಅಭಿಮಾನಿಗಳು, ‘ಗಿಲ್ಲಿ ನಟ ಈಗಾಗಲೇ ಗೆದ್ದಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಗಿಲ್ಲಿ ನಟ ಅವರಿಗೆ ಹೊರಗಡೆ ಇರುವ ಕ್ರೇಜ್ ಅಸಾಧಾರಣ ಆಗಿದೆ. ಅದನ್ನು ನೋಡಿದ ಎಲ್ಲರೂ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಗಿಲ್ಲಿ ಬಿಗ್ ಬಾಸ್ ವಿನ್ನರ್ (Bigg Boss Kannada Season 12 Winner) ಎಂಬುದಕ್ಕೆ ಈ ಕ್ರೇಜ್ ಸಾಕ್ಷಿ ಎಂದು ಫ್ಯಾನ್ಸ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

