ಬಿಗ್ ಬಾಸ್ ಆಟ ಆರಂಭ ಆಗೋದಕ್ಕೂ ಮೊದಲೇ ಶುರುವಾಯ್ತು ಜಗಳ

Updated on: Sep 07, 2026 | 6:23 PM

ಸೆಪ್ಟೆಂಬರ್ 6ರಂದು ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಪರಿಚಯಿಸಿ ಬಿಗ್ ಬಾಸ್ ಮನೆಗೆ ಕಳಿಸಿದ್ದಾರೆ. ಮನೆಯೊಳಗೆ ಹೋದ ಸ್ಪರ್ಧಿಗಳು ಆಟ ಶುರು ಮಾಡಬೇಕಿದೆ. ಆಟ ಶುರು ಆಗುವುದಕ್ಕೂ ಮೊದಲೇ ಜಗಳ ಆರಂಭ ಆಗಿದೆ. ಸೆ.7ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಹಂಚಿಕೊಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋಗೆ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 6ರಂದು ಎಲ್ಲ ಸ್ಪರ್ಧಿಗಳನ್ನು ಪರಿಚಯಿಸಿ ದೊಡ್ಮನೆಗೆ ಕಳಿಸಿದ್ದಾರೆ. ಮನೆಯೊಳಗೆ ಹೋದ ಸ್ಪರ್ಧಿಗಳು ಆಟ ಶುರು ಮಾಡಬೇಕಿದೆ. ಆಟ ಶುರು ಆಗುವುದಕ್ಕೂ ಮೊದಲೇ ಜಗಳ ಆರಂಭ ಆಗಿದೆ. ಸೆಪ್ಟೆಂಬರ್ 7ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಜನಸಾಮಾನ್ಯರಿಗೂ ಅವಕಾಶ ಸಿಕ್ಕಿದೆ. ಜೊತೆಗೆ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇಬ್ಬರ ನಡುವೆ ಒಂದು ರೀತಿಯ ಪೈಪೋಟಿ ಶುರು ಆಗಿದೆ. ಈಗಾಗಲೇ ಅಗ್ನಿಪರೀಕ್ಷೆಯ ವೇದಿಕೆಯಲ್ಲಿ ಪಳಗಿ ಬಂದಿರುವ ಜನಸಾಮಾನ್ಯ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಆರಂಭದಲ್ಲೇ ಅಬ್ಬರಿಸಲು ಶುರುಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More