AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಶೆಟ್ಟಿ ಮೋಸ? ಸುದೀಪ್ ಕ್ಲಾಸ್

ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಶೆಟ್ಟಿ ಮೋಸ? ಸುದೀಪ್ ಕ್ಲಾಸ್

ರಾಜೇಶ್ ದುಗ್ಗುಮನೆ
|

Updated on:Oct 31, 2026 | 3:51 PM

Share

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಸೌಂದರ್ಯಾ ಶೆಟ್ಟಿಗೆ ಸುದೀಪ್ ಪಾಠ ಹೇಳುವ ಎಲ್ಲಾ ಸಾಧ್ಯತೆ ಇದೆ. ಅವರು ಕ್ಯಾಪ್ಟನ್ ಆಗಿದ್ದರೂ ತಾರತಮ್ಯ ಮಾಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಆಟದಲ್ಲಿ ಯಶಸ್​ಗೆ ಲಾಭ ಮಾಡಿಕೊಟ್ಟಿದ್ದರು. 

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ  ಹಲವು ಡ್ರಾಮಾಗಳು ನಡೆಯುತ್ತಿವೆ. ಈ ವಾರ ಸೌಂದರ್ಯಾ ಶೆಟ್ಟಿ ಅವರು ಕ್ಯಾಪ್ಟನ್ ಆಗಿದ್ದರು. ಈ ವೇಳೆ ವರನ ಹುಡುಕುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ವೇಳೆ ಅವರು ಯಶಸ್​ಗೆ ಫೇವರ್ ಮಾಡಿರುವ ಆರೋಪ ಕೇಳಿ ಬಂದಿದೆ. ಗಗನ್​ ಅವರು ಡೇಟಿಂಗ್ ಟಾಸ್ಕ್​ ಅಲ್ಲಿ ಉತ್ತಮವಾಗಿ ಆಡಿದ್ದಾರೆ ಎಂದು ಸೌಂದರ್ಯಾ ಬಾಯಿಯಿಂದಲೇ ಬಂದಿದೆ. ಆದಾಗ್ಯೂ ಗಗನ್ ಸೋತಿದ್ದಾನೆ. ಸೌಂದರ್ಯಾ ಅವರು ಮಾಡಿದ ಮೋಸದಾಟವೇ ಇದೆಲ್ಲ ಬೆಳವಣಿಗೆ ಕಾರಣ ಎಂದು ಹೇಳಲಾಗುತ್ತಾ ಇದೆ.  ಸುದೀಪ್ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು, ಯಾವ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

Published on: Oct 31, 2026 03:50 PM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More