50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ? ವಿವರಿಸಿದ ಬಿಗ್ ಬಾಸ್ ವಿನ್ನರ್
ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟ, 50 ಲಕ್ಷ ರೂಪಾಯಿ ಬಹುಮಾನದ ಹಣದ ಕುರಿತು ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕಷ್ಟಪಟ್ಟು ಬದುಕಿದ ದಿನಗಳನ್ನು ನೆನಪಿಸಿಕೊಂಡು, ಈಗ ಜಮೀನು ಖರೀದಿಸಿ, ಫಾರ್ಮ್‌ಹೌಸ್ ನಿರ್ಮಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಊರಿನಲ್ಲಿ ಕೃಷಿ ಮಾಡುವ ಕನಸು ಕಂಡಿದ್ದಾರೆ.
ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟ, ತಮಗೆ ಸಿಕ್ಕ 50 ಲಕ್ಷ ರೂಪಾಯಿ ಬಹುಮಾನದ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಟಿವಿ9 ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಅವರ ನೈಜತೆಯೇ ಗೆಲುವಿಗೆ ಕಾರಣವಾಯಿತು. ಹಿಂದಿನ ಸೀಸನ್‌ಗಳ ಸ್ಪರ್ಧಿಗಳಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ತಮ್ಮದೇ ಆದ ವ್ಯಕ್ತಿತ್ವದಿಂದ ಎಲ್ಲರನ್ನು ಗಮನ ಸೆಳೆದಿದ್ದಾರೆ. ಬೆಂಗಳೂರಿಗೆ ಬಂದಾಗ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡ ಗಿಲ್ಲಿ, “ಊಟ, ಮನೆಗಾಗಿ ಒದ್ದಾಡಿದ್ದೇನೆ. ಕೈಯಲ್ಲಿ ಹಣ ಇಲ್ಲದ ಸಮಯದಲ್ಲಿ ಬೆಂಗಳೂರಿಗೆ ಬಂದೆ, ಊಟಕ್ಕಾಗಿ ದೇವಾಲಯ, ಚೌಟ್ರಿಗಳನ್ನು ಹುಡುಕಿದೆ” ಎಂದು ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ. ಇದೀಗ 50 ಲಕ್ಷ ರೂಪಾಯಿ ಕೈಯಲ್ಲಿರುವಾಗ, ಬೆಂಗಳೂರಿನ ಜಂಜಾಟದಿಂದ ದೂರವಾಗಿ, ತಮ್ಮ ಊರಿನಲ್ಲಿ ಒಂದು ಜಮೀನು ಖರೀದಿಸಿ, ಫಾರ್ಮ್‌ಹೌಸ್ ನಿರ್ಮಿಸಿ ಕೃಷಿ ಮಾಡುವ ಕನಸು ಕಂಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ನಮ್ಮ ಹಳ್ಳಿಯಲ್ಲೇ ಉಳಿದುಕೊಳ್ಳುವ ಯೋಜನೆಯನ್ನು ಗಿಲ್ಲಿ ಹಾಕಿಕೊಂಡಿದ್ದಾರೆ.
ಬಿಗ್ಬಾಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
