ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ, ನಿದ್ರೆ ಬರಲ್ಲ: ವಿನ್ನರ್ ನಿಖಿಲ್ ಅನುಭವ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆ ಜನವರಿ 25 ಮತ್ತು 26ರಂದು ನಡೆಯಲಿದೆ. ಈ ಬಾರಿ ಯಾರು ವಿನ್ ಆಗ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ‘ಬಿಗ್ ಬಾಸ್ ತೆಲುಗು 8’ ವಿನ್ನರ್ ಆದ ಕನ್ನಡಿಗ ನಿಖಿಲ್ ಅವರು ಈಗ ತಮ್ಮ ಅನುಭವವನ್ನು ಟಿವಿ 9 ಜೊತೆ ಹಂಚಿಕೊಂಡಿದ್ದಾರೆ. ಫಿನಾಲೆ ವಾರದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಕನ್ನಡಿಗ ನಿಖಿಲ್ ಅವರು ‘ಬಿಗ್ ಬಾಸ್ ತೆಲುಗು ಸೀಸನ್ 8’ರ ವಿನ್ನರ್ ಆಗಿದ್ದರು. ಅವರೀಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ‘ಎಲ್ಲ ಫೈನಲಿಸ್ಟ್ಗಳಿಗೆ ಅಭಿನಂದನೆ. ಈ ವಾರ ಹೇಗೆ ಅನಿಸುತ್ತದೆ ಎಂಬುದು ಅನುಭವಿಸಿದವರಿಗೇ ಗೊತ್ತು. ನಾನು ಫಿನಾಲೆಯಲ್ಲಿ ಇದ್ದಾಗ ಹಾಗೆ ಆಗಿತ್ತು. ಎಲ್ಲರೂ ಚಿಂತೆಯಲ್ಲಿ ಇರುತ್ತಾರೆ. ಸರಿಯಾಗಿ ಊಟ ಸೇರಲ್ಲ, ನಿದ್ರೆ ಬರಲ್ಲ’ ಎಂದು ನಿಖಿಲ್ ಹೇಳಿದ್ದಾರೆ. ಭವ್ಯಾ ಗೌಡ, ಹನುಮಂತ, ಮೋಕ್ಷಿತಾ ಪೈ, ರಜತ್, ಉಗ್ರಂ ಮಂಜು, ತ್ರಿವಿಕ್ರಮ್ ಅವರು ಫಿನಾಲೆ ತಲುಪಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos