ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
‘ಪ್ರತಿ ಸೀಸನ್ ಕೂಡ ಭಿನ್ನವಾಗಿರುತ್ತದೆ. ಆಡುವ ಸ್ಪರ್ಧಿಗಳ ಮೇಲೆ ನಿರ್ಧಾರ ಆಗಿರುತ್ತದೆ. ಯಾರು ಗೆಲ್ಲುತ್ತಾರೆ ಎಂಬ ಕೌತುಕ ಈಗ ನನಗೂ ಇದೆ. ಸುದೀಪ್ ಅವರು ಇದೇ ಕೊನೇ ಸೀಸನ್ ನಿರೂಪಣೆ ಮಾಡುತ್ತಿರುವುದು ಅಂತ ತಿಳಿದು ಬೇಸರ ಆಯಿತು’ ಎಂದು ‘ಬಿಗ್ ಬಾಸ್ ತೆಲುಗು ಸೀಸನ್ 8’ ವಿಜೇತ ನಿಖಿಲ್ ಅವರು ಹೇಳಿದ್ದಾರೆ.
‘ಬಿಗ್ ಬಾಸ್ ತೆಲುಗು ಸೀಸನ್ 8’ರಲ್ಲಿ ಕನ್ನಡದ ಹುಡುಗ ನಿಖಿಲ್ ಅವರು ಟ್ರೋಫಿ ಗೆದ್ದರು. ಈಗ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಫಿನಾಲೆ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ನಿಖಿಲ್ ಅವರು ಮಾತನಾಡಿದ್ದಾರೆ. ‘ಕನ್ನಡ ಮತ್ತು ತೆಲುಗು ಬಿಗ್ ಬಾಸ್ ನಡುವೆ ಭಾಷೆ, ನಿರೂಪಕರನ್ನು ಬಿಟ್ಟು ಬೇರೆ ಏನೂ ವ್ಯತ್ಯಾಸ ಇಲ್ಲ. ಸೀಸನ್ 12ರಲ್ಲಿ ಅವಕಾಶ ಸಿಕ್ಕರೆ ಕನ್ನಡ ಬಿಗ್ ಬಾಸ್ ಒಪ್ಪಿಕೊಳ್ಳಲ್ಲ. ಸುದೀಪ್ ಸರ್ ಅವರನ್ನು ನೋಡಿದ್ರೆ ಭಯ ಆಗುತ್ತೆ. ಅವರ ಧ್ವನಿ ಆ ರೀತಿ ಇರುತ್ತದೆ’ ಎಂದು ನಿಖಿಲ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್ ನೀಡಿದ್ದ ಭರವಸೆ ಬಗ್ಗೆ ಬೈಕ್ ಟ್ಯಾಕ್ಸಿ ರೈಡರ್ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
