‘ದಿ ಡೆವಿಲ್’ ಆಫರ್ ಬಂದಾಗ ಸುದೀಪ್ ಬಳಿ ಸಲಹೆ ಕೇಳಿದ್ದ ಬಿಗ್ ಬಾಸ್ ವಿನಯ್

Updated By: ಮದನ್​ ಕುಮಾರ್​

Updated on: Sep 24, 2025 | 8:59 PM

‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ವಿನಯ್ ಅವರು ಕಿಚ್ಚ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅದರ ಜೊತೆಗೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ವಿನಯ್ ಅವರಿಗೆ ಸಿಕ್ಕಿದೆ. ಆ ಕುರಿತು ಟಿವಿ9 ಜೊತೆ ಅವರು ಮಾತನಾಡಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ (Vinay Gowda) ಅವರು ಕಿಚ್ಚ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ, ದರ್ಶನ್ (Darshan) ನಟನೆಯ ‘ದಿ ಡೆವಿಲ್’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೂಡ ವಿನಯ್ ಅವರಿಗೆ ಸಿಕ್ಕಿದೆ. ಆ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಡೆವಿಲ್ ಸಿನಿಮಾ ಆಫರ್ ಬಂದಾಗ ನಾನು ಮೊದಲು ಮಾತನಾಡಿದ್ದು ಸುದೀಪ್ ಸರ್ ಜೊತೆ. ಈ ರೀತಿಯ ಒಂದು ಅವಕಾಶ ಬಂದಿದೆ, ಏನ್ ಮಾಡಲಿ ಸರ್ ಅಂತ ಅವರನ್ನು ಹೇಳಿದೆ. ಯಾಕೆಂದರೆ, ನಾನು ನನ್ನ ವೃತ್ತಿ ಜೀವನದ ಎಲ್ಲ ಕೆಲಸಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಮಾಡುತ್ತೇನೆ. ಆ ವಿಷಯ ಹೇಳಿದ ತಕ್ಷಣ, ಹೋಗಿ ಮಾಡು.. ಅದು ಒಳ್ಳೆಯ ಅವಕಾಶ. ನಿನ್ನ ಕೆಲಸ ನಟಿಸೋದು ಅಂತ ನನಗೆ ಹೇಳಿದರು’ ಎಂದಿದ್ದಾರೆ ವಿನಯ್. ‘ದಿ ಡೆವಿಲ್’ ಸಿನಿಮಾ (The Devil) ಡಿಸೆಂಬರ್ 12ರಂದು ಬಿಡುಗಡೆ ಆಗಲಿದೆ. ಪೊಲಿಟಿಕಲ್ ಡ್ರಾಮಾ ಕಥೆ ಈ ಚಿತ್ರದಲ್ಲಿ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.