ಕೊಲ್ಹಾಪುರ: ಮುಳುಗಡೆಗೊಂಡಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಬೈಕ್ ಸವಾರರು
ಪಂಚಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಹರಿಯುತ್ತಿರುವ ನೀರು ದೂರದಿಂದ ನೋಡಿದರೆ ನಿಧಾನಕ್ಕೆ ಚಲಿಸುತ್ತಿರುವಂತೆ ಭಾಸವಾಗುತ್ತದೆ ಅದರೆ ನೀರಿನ ಸೆಳತ ಜೋರಾಗಿರುತ್ತದೆ. ಜನ ನೀರಿನ ಹರಿವನ್ನು ಅಂಡರ್ ಎಸ್ಟಿಮೇಟ್ ಮಾಡಿ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಾರೆ. ಜನ ಎಚ್ಚರ ವಹಿಸಬೇಕೆನ್ನುವುದೇ ನಮ್ಮ ಆಶಯ.
ಬೆಳಗಾವಿ: ಜೀವದೊಂದಿಗೆ ಚೆಲ್ಲಾಟವೆಂದರೆ ಇದೇ ಇರಬೇಕು. ದೃಶ್ಯಗಳಲ್ಲಿ ಕಾಣುತ್ತಿರುವ ಬ್ರಿಡ್ಜ್-ಕಮ್- ಬ್ಯಾರೇಜ್ ಸರಳ ಭಾಷೆಯಲ್ಲಿ ಹೇಳುವುದಾದರೆ ಸೇತುವೆಯು ಮುಳುಗಡೆಯಾಗಿದೆ ಮತ್ತು ನೀರು ಸೇತುವೆ ಮೇಲಿಂದ ಹರಿಯುತ್ತಿದೆ. ಆದರೆ ಕೆಲ ದ್ವಿಚಕ್ರ ವಾಹನ ಸವಾರರು ಮುಳುಗಡೆಯಾಗಿರುವ ಸೇತುವೆ ಮೇಲೆ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಿದ್ದಾರೆ. ಇದು ಹುಚ್ಚಾಟ ಮತ್ತು ಮೂರ್ಖತನದ ಪ್ರದರ್ಶನ. ನೆರೆರಾಜ್ಯ ಮಹಾರಾಷ್ಟ್ರ ಕೊಲ್ಹಾಪುರ ಜಿಲ್ಲೆಯ ಶಿಂಗನಾಪುರದಲ್ಲಿ ಕಂಡು ಬಂದ ದೃಶ್ಯವಿದು. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಒಂದೇ ಸಮ ಸುರಿಯುತ್ತದೆ ಮತ್ತು ಅದರ ಪರಿಣಾಮವಾಗಿ ಪಂಚಗಂಗಾ ನದಿ ಉಕ್ಕಿ ಹರಿಯುತ್ತಿದೆ. ಶಿಂಗನಾಪುರ ಬಳಿ ಪಂಚಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಜಲಾವೃತಗೊಂಡಿದ್ದರೂ ಜನ ರಿಸ್ಕ್ ತೆಗೆದುಕೊಂಡು ರಭಸದಿಂದ ನೀರು ಹರಿಯುತ್ತಿರುವ ಸೇತುವೆ ಮೇಲೆ ಬೈಕ್ ಗಳನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ. ಹೀಗೆ ರಿಸ್ಕ್ ತೆಗೆದುಕೊಂಡ ಜನ ಅಪಾಯಕ್ಕೀಡಾದ, ನದಿ ನೀರಲ್ಲಿ ವಾಹನದ ಜೊತೆ ಕೊಚ್ಚಿಕೊಂಡು ಹೋದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ, ಆದರೂ ಜನ ತಿಳುವಳಿಕೆ ಪ್ರದರ್ಶಿಸಲಾರರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉತ್ತರ ಕನ್ನಡ: ಧಾರಾಕಾರ ಮಳೆಗೆ ಗಂಗಾವಳಿ ನದಿ ಸೇತುವೆ ಮುಳುಗಡೆ, ಐದಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಷ್ಟ