ರೌಡಿ ಶೀಟರ್ ಬಿಕ್ಲು ಶಿವ ಹತ್ಯೆಗೆ ಕಾರಣವಾಗಿದ್ದು ಇದೇ ಘಟನೆ: Exclusive ವಿಡಿಯೋ ಇಲ್ಲಿದೆ
ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಸೇರಿದಂತೆ 20 ಆರೋಪಿಗಳನ್ನು ಬಂಧಿಸಲಾಗಿದೆ. ಜಗ್ಗ ಮತ್ತು ಶಿವ ಸ್ನೇಹಿತರಾಗಿದ್ದರು, ಆದರೆ ಮಲಯಾಳಿ ಅಜಿತ್ ಸೂಚನೆಯಂತೆ ಆಟೋ ಜೈ ಇವರ ನಡುವೆ ಜಗಳ ಹುಟ್ಟುಹಾಕಿ ವೈಮನಸ್ಸಿಗೆ ಕಾರಣನಾಗಿದ್ದ. ಬಳಿಕ ಜುಲೈ 15ರಂದು ಬಿಕ್ಲು ಶಿವನನ್ನು ಕೊಲೆ ಮಾಡಲಾಗಿದ್ದು, ಪ್ರಕರಣದ ಹಿಂದಿನ ಪಿತೂರಿ ಹಾಗೂ ವೈರತ್ವಕ್ಕೆ ಕಾರಣವಾದ ವಿಡಿಯೋ TV9ಗೆ ಲಭಿಸಿದೆ.
ಬೆಂಗಳೂರು, ಫೆಬ್ರವರಿ 17: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಪ್ರಕರಣದ ಹಿಂದಿನ ಪಿತೂರಿ ಹಾಗೂ ವೈರತ್ವಕ್ಕೆ ಕಾರಣವಾದ ವಿಡಿಯೋ TV9ಗೆ ಲಭಿಸಿದ್ದು, ಮೂಲಗಳ ಪ್ರಕಾರ ಬಿಕ್ಲು ಶಿವ ಮತ್ತು ಜಗ್ಗ ಈ ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಮಲಯಾಳಿ ಅಜಿತ್‌ನ ಬಂಟ ಆಟೋ ಜೈ, ಜಗ್ಗ ಮತ್ತು ಶಿವನ ನಡುವೆ ವೈಮನಸ್ಸು ಮೂಡಿಸಲು ಸಂಚು ರೂಪಿಸಿದ್ದ. ಡಾನ್ ಪದದ ಕುರಿತು ನಡೆದ ಸಣ್ಣ ಗಲಾಟೆಯನ್ನು ದೊಡ್ಡದು ಮಾಡಿ, ಜಗ್ಗನ ವಿರುದ್ಧ ಬಿಕ್ಲು ಶಿವ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಮಾಡಿದ್ದ. ನಂತರ ಆಟೋ ಜೈ, ಕೊಲೆ ಪ್ರಕರಣದ ಎ2 ಆರೋಪಿ ಕಿರಣ್‌ಗೆ (ಜಗ್ಗನ ಭಾವ) ಕರೆ ಮಾಡಿ, ಬಿಕ್ಲು ಶಿವ ಜಗ್ಗನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾನೆ ಎಂದು ಪ್ರಚೋದಿಸಿದ್ದ. ಇದರಿಂದ ಕೆರಳಿದ ಕಿರಣ್ ಕೆ.ಆರ್. ಪುರಂ ಮತ್ತು ಅಮೃತಹಳ್ಳಿ ಹುಡುಗರ ತಂಡವನ್ನು ಕಟ್ಟಿಕೊಂಡು ಜುಲೈ 15ರಂದು ಬಿಕ್ಲು ಶಿವನನ್ನು ಆತನ ಮನೆಯ ಬಳಿಯೇ ಕೊಲೆ ಮಾಡಿದ್ದ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 17, 2026 11:43 AM
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು

