Karnataka Budget Session; ಆಪರೇಶನ್ ಕಮಲ ನಡೆಸಿಯೇ ಬಿಜೆಪಿ ರಾಜ್ಯದಲ್ಲಿ ಎರಡು ಸಲ ಅಧಿಕಾರಕ್ಕೆ ಬಂದಿದ್ದು: ಸಿದ್ದರಾಮಯ್ಯ

Updated on: Mar 17, 2025 | 3:04 PM

ಗ್ಯಾರಂಟಿ ಯೋಜನೆಗಳು ತಮ್ಮ ಬಿಡಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಅದರೆ ಶಿಗ್ಗಾವಿಯಲ್ಲಿ ಸಿಎಂ ಸಮುದಾಯದ ಮತದಾರರ ವೋಟಿಗಾಗಿ ಭಿಕ್ಷೆ ಬೇಡುವ ಪ್ರಸಂಗ ಯಾಕೆ ಬಂತು ಅಂತ ಬಿವೈ ವಿಜಯೇಂದ್ರ ಕೇಳಿದರೆ, ಲಿಂಗಾಯತ ಸಮುದಾಯದವರೂ ಕಾಂಗ್ರೆಸ್ ಗೆ ಮತ ನೀಡಿದ್ದಾರೆ, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಅಲ್ಲಿ ಗೆದ್ದಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು, 17ಮಾರ್ಚ್: ರಾಜ್ಯದಲ್ಲಿ ಬಿಜೆಪಿ ಎರಡು ಸಲ ಆಡಳಿತ ನಡೆಸಿದೆ 2009-2013 ಮತ್ತು 2019ರಿಂದ 2023, ಅದರೆ ಒಮ್ಮೆಯಾದರೂ ಜನಾರ್ಶೀರ್ವಾದದೊಂದಿಗೆ ಪೂರ್ಣ ಬಹುಮತ (mandate) ಪಡೆದು ಸರ್ಕಾರ ರಚಿಸಿರುವ ಉದಾಹರಣೆ ಇದೆಯಾ? ಎಂದು ಸದನದಲ್ಲಿಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಆಪರೇಶನ್ ಕಮಲ ನಡೆಸದೆ ಅವರು ಅಧಿಕಾರ ಪಡೆದ ಉದಾಹರಣೆ ಇಲ್ಲ, ಕೇವಲ ಜಾತಿ ಹೆಸರು ಹೇಳಿಕೊಂಡು ವೋಟು ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ, ಶಿಗ್ಗಾವಿ ಉಪಚುನಾವಣೆಯಲ್ಲಿ ಎಲ್ಲ ಸಮುದಾಯದವರು ಕಾಂಗ್ರೆಸ್​ಗೆ ಮತ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session: ಬಿಜೆಪಿ ಯಾವತ್ತೂ ಮುಂಬಾಗಿಲಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಶನ್ ಕಮಲ ಆರಂಭಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ