ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿ ಬಿಹಾರದಲ್ಲಿ ನಮ್ಮನ್ನು ಅನುಸರಿಸುತ್ತಿದೆ: ಡಿಕೆ ಶಿವಕುಮಾರ್

Updated on: Jul 17, 2025 | 5:48 PM

ತುಂಬಾ ಅವರಸರದಲ್ಲಿದ್ದಂತೆ ಕಂಡ ಶಿವಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳನ್ನಾಗಿ ವಿಂಗಡಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ತಮ್ಮ ವಾರ್ಡ್​ಗಳನ್ನು ಅಭಿವೃದ್ಧಿಗೊಳಿಸಬೇಕೆಂಬ ನಿಸ್ವಾರ್ಥ ಮನೋಭಾವದ ಕಾರ್ಪೋರೇಟರ್​ಗಳು ಇಲ್ಲದೆ ಹೋದರೆ, ಬಿಬಿಎಂಪಿಯನ್ನು ಎಷ್ಟೇ ಭಾಗಗಳಲ್ಲಿ ಹೋಳು ಮಾಡಿದರೂ ಪ್ರಯೋಜನವಾಗದು.

ಬೆಂಗಳೂರು, ಜುಲೈ 17: ನಗರದಲ್ಲಿ ಇಂದು ನಡೆದ ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿ ಈಗ ಕರ್ನಾಟಕ ಮಾದರಿಯನ್ನು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Polls) ಅನುಸರಿಸುತ್ತಿದೆ ಎಂದು ಹೇಳಿದರು. ಕೇವಲ ಬಿಹಾರ ಮಾತ್ರವಲ್ಲ, ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಯ ನಂತರ ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ ನಡೆದಿದೆಯೋ ಅಲ್ಲೆಲ್ಲ ಬಿಜೆಪಿ ಕರ್ನಾಟಕದ ಉದಾಹರಣೆಯನ್ನು ಫಾಲೋ ಮಾಡಿದೆ. ಹರಿಯಾಣ, ರಾಜಸ್ತಾನ, ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಇದನ್ನೇ ಮಾಡಿದ್ದು ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಬೆಂಗಳೂರು ಸುರಂಗ ಮಾರ್ಗ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ: ತೇಜಸ್ವಿ ಸೂರ್ಯ ಸವಾಲು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ