ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಏನಂದ್ರು ನೋಡಿ
ಬಿಜೆಪಿ ನಾಯಕ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರಲಿದ್ದಾರೆಯೇ? ಇಂಥದ್ದೊಂದು ವದಂತಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಅದರಲ್ಲೂ ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರದಲ್ಲಿ ಅವರು ಬೆಂಬಲ ನೀಡಿರುವುದು ವದಂತಿಗೆ ಪುಷ್ಟಿ ನೀಡಲು ಕಾರಣವಾಗಿದೆ. ಆದರೆ, ಈ ಬಗ್ಗೆ ಪ್ರತಾಪ್ ಸಿಂಹ ಕೊಟ್ಟ ಸ್ಪಷ್ಟನೆ ಏನು ನೋಡಿ.
ಮೈಸೂರು, ಡಿಸೆಂಬರ್ 30: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರುವ ಬಗ್ಗೆ ಒಲವು ಹೊಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಖುದ್ದು ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ಈ ಈತರ ಊಹಾಪೋಹಗಳನ್ನು ಮಾಡುವವರಿಗೆ ನಾನು ಒಂದು ಮಾತು ಹೇಳುತ್ತೇನೆ, ಪ್ರತಾಪ್ ಸಿಂಹ ಕಾಂಗ್ರೆಸ್ಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ ಎಂದರು.
ನನ್ನ ತಂದೆಯೂ ಜನಸಂಘದವರು, ಪ್ರತಾಪ್ ಸಿಂಹ ಕೂಡ ಎಂದಿಗೂ ಬಿಜೆಪಿಯಲ್ಲಿಯೇ ಇರುತ್ತಾನೆ. ನಮ್ಮದು ಸೈದ್ಧಾಂತಿಕ ಬದ್ಧತೆ ಇರುವ ಪಕ್ಷ. ಕಾಂಗ್ರೆಸ್ಗೆ ಹೋಗಬೇಕು ಎಂದಿದ್ದರೆ ಚುನಾವಣೆ ಸಂದರ್ಭದಲ್ಲಿಯೇ ಹೋಗಬಹುದಿತ್ತಲ್ಲವೇ? ಆ ಪಕ್ಷದಿಂದ ಯಾರ್ಯಾರು ನನಗೆ ಫೋನ್ ಮಾಡಿ ನನಗೆ ಟಿಕೆಟ್ ಆಫರ್ ಮಾಡಿದ್ದರು ಅವರ ಬಳಿ ಕೇಳಿ ನೋಡಿ. ಹೋಗುವುದಿದ್ದರೆ ಆಗಲೇ ಹೋಗುತ್ತಿದ್ದೆ ಎಂದರು. ಪ್ರತಾಪ್ ಸಿಂಹ ಮಾತಿನ ಪೂರ್ಣ ವಿವರ ವಿಡಿಯೋದಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ