Karnataka Assembly Session; ಎರಡು ಲಕ್ಷ ಜನ ಬಂದಾಗಲೂ ಬಿಜೆಪಿ ಸರ್ಕಾರ ಹಿಂಸೆಗೆ ಆಸ್ಪದ ನೀಡಿರಲಿಲ್ಲ: ಆರ್ ಅಶೋಕ

|

Updated on: Dec 12, 2024 | 4:34 PM

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಂಚಮಸಾಲಿ ಸಮುದಾಯದ ಸುಮಾರು 2 ಲಕ್ಷ ಸೇರಿದ್ದರೂ, ಹಿಂಸೆಗೆ ಆಸ್ಪದ ನೀಡದ ಹಾಗೆ ಪರಿಸ್ಥಿಯನ್ನು ನಿಭಾಯಿಸಲಾಗಿತ್ತು, ಪಂಚಮಸಾಲಿ ಸಮುದಾಯ ಪರ ಹೋರಾಟ ಮಾಡುತ್ತಿರುವ ಸ್ವಾಮೀಜಿ ಬಿಜೆಪಿಯವರೇ ಅಂತ ಪ್ರಶ್ನಿಸಲಾಗುತ್ತಿದೆ, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದಾಕ್ಷಣ ಅವರು ಬಿಜೆಪಿಯವರಾಗಿ ಬಿಡುತ್ತಾರೆಯೇ ಎಂದು ಅಶೋಕ ಕೇಳಿದರು.

ಬೆಳಗಾವಿ: ವಿಧಾನಸಭಾ ಅಧಿವೇಶನದಲ್ಲಿ ಇಂದು ಪಂಚಮಸಾಲಿ ಪ್ರತಿಭಟನೆಕಾರರ ಮೇಲೆ ನಡೆದ ಲಾಠಿಚಾರ್ಜ್ ಪ್ರಕರಣ ಮಾರ್ದನಿಸಿತು. ಸರ್ಕಾರದ ಪರ ಗೃಹಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ ಬಳಿಕ ಮಾತಾಡಿದ ವಿಪಕ್ಷ ನಾಯಕ ಅರ್ ಅಶೋಕ, ಗೃಹ ಸಚಿವರು ಹತ್ತು ಸಾವಿರ ಜನ ಬಂದಾಗ ಪೊಲೀಸರು ಅವರಿಗೆ ಮುತ್ತಡಬೇಕಿತ್ತಾ ಅನ್ನುತ್ತಾರೆ, ಪ್ರತಿಭಟನೆಕಾರರು ರೈತರು ನಮಗೆ ತುತ್ತು ನೀಡುವ ಜನ, ಅವರನ್ನು ಹೇಗೆ ನಿಭಾಯಿಸಬೇಕು ಅಂತ ಪೊಲೀಸರಿಗೆ ಗೊತ್ತಾಗಲಿಲ್ಲವೇ? ಇದು ಬಹಳ ಸೂಕ್ಷ್ಮವಾದ ವಿಷಯ ಅನ್ನೋದನ್ನು ಸರ್ಕಾರ ಮತ್ತು ಪೊಲೀಸರು ಯಾಕೆ ಅರ್ಥಮಾಡಿಕೊಳ್ಳಲಿಲ್ಲ ಎಂದು ಅಶೋಕ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲಿಂಗಾಯತರ ಮೇಲೆ ಕೈಯೆತ್ತು ಹೀನಕೃತ್ಯವನ್ನು ಸಿದ್ದರಾಮಯ್ಯ ಮಾಡಿದ್ದಾರೆ: ಆರ್ ಅಶೋಕ