ಕೋಲಾರದ ಬಿಜೆಪಿ ಮುಖಂಡ ಹುಟ್ಟುಹಬ್ಬ ಆಚರಣೆಯಲ್ಲಿ ಸೇಬು ಕಿತ್ತು ತಿಂದವನೇ ಜಾಣ!

ಕೋಲಾರದ ಬಿಜೆಪಿ ಮುಖಂಡ ಹುಟ್ಟುಹಬ್ಬ ಆಚರಣೆಯಲ್ಲಿ ಸೇಬು ಕಿತ್ತು ತಿಂದವನೇ ಜಾಣ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 15, 2022 | 4:05 PM

ವಿಶೇಷವೆಂದರೆ ಹುಟ್ಟು ಹಬ್ಬ ಆಚರಣೆ ನಂತರ ಸೇಬು ಹಣ್ಣುಗಳಿಗಾಗಿ ಗ್ರಾಮದ ಜನ ಮುಗಿಬಿದ್ದಿದ್ದು. ನೋಡುನೋಡುತ್ತಿದ್ದಂತೆಯೇ ಬೃಹತ್ ಗಾತ್ರದ ಸೇಬಿನ ಹಾರ ಕರಗಿಬಿಟ್ಟಿತು!

ಕೋಲಾರ: ಜಿಲ್ಲೆಯ ಮಾಲೂರು (Malur) ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಶನಿವಾರದಂದು ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ (Vijaykumar Hoodi) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ವಿಶೇಷ ಅದಲ್ಲ. ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಸೇಬು ಹಣ್ಣುಗಳ (apples) ಮುಗಿಲೆತ್ತರದ ಹಾರ ಮಾಡಿಸಿದ್ದಾರೆ. ಅದನ್ನು ಅವರ ಕೊರಳಿಗೆ ಹೇಗೆ ಹಾಕಿದರು ಅನ್ನೋದು ಕೂಡ ವಿಶೇಷ ಅಲ್ಲ. ವಿಶೇಷವೆಂದರೆ ಹುಟ್ಟು ಹಬ್ಬ ಆಚರಣೆ ನಂತರ ಸೇಬು ಹಣ್ಣುಗಳಿಗಾಗಿ ಗ್ರಾಮದ ಜನ ಮುಗಿಬಿದ್ದಿದ್ದು. ನೋಡುನೋಡುತ್ತಿದ್ದಂತೆಯೇ ಬೃಹತ್ ಗಾತ್ರದ ಸೇಬಿನ ಹಾರ ಕರಗಿಬಿಟ್ಟಿತು!

Published on: Oct 15, 2022 04:01 PM