ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿರುವ ಯೋಗೇಶ್ವರ್ ಪುತ್ರಿ ನಿಶಾ ಕಾಂಗ್ರೆಸ್ ಸೇರಲಿದ್ದಾರೆ!

|

Updated on: Mar 30, 2024 | 2:17 PM

ಇತ್ತೀಚಿನ ದಿನಗಳಲ್ಲಿ ನಿಶಾ, ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಜೊತೆ ಕಾಣಿಸಿಕೊಳ್ಳತೊಡಗಿದಾಗ ಅವರು ಪಕ್ಷ ಸೇರುವ ಬಗ್ಗೆ ವದಂತಿ ಹರಿದಾಡತೊಡಗಿತ್ತು. ನಿಶಾ ಇಲ್ಲಿ ಅದನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸೇರಲು ತಂದೆಯವರಿಂದ ಯಾವುದೇ ಅಡಚಣೆ ಇಲ್ಲ, ಅವರು ತನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವರೆಂದು ನಿಶಾ ಹೇಳುತ್ತಾರೆ.

ರಾಮನಗರ: ರಾಜ್ಯ ರಾಜಕಾರಣದಲ್ಲಿ ಹೀಗೂ ಆಗುತ್ತೆ, ಅಪ್ಪ ಬಿಜೆಪಿ ಮಗಳು ಕಾಂಗ್ರೆಸ್! ರಾಮನಗರ ಟಿವಿ9 ಕನ್ನಡ ವರದಿಗಾರನ ಜೊತೆ ಮಾತಾಡುತ್ತಿರುವ ಸುಂದರ ಯುವತಿಯ ಮುಖ ಪರಿಚಯ ಕನ್ನಡಿಗರಿಗೆ ಇದೆ. ಬಿಜೆಪಿಯ ಪ್ರಭಾವಿ ನಾಯಕ, ಮಾಜಿ ಶಾಸಕ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ಅವರ ಗೆಲುವಿಗೆ ಒಂದೇ ಸಮ ಶ್ರಮಿಸುತ್ತಿರುವ ಸಿಪಿ ಯೋಗೇಶ್ವರ್ (CP Yogeshwar) ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಇವರು. ನಿಶಾ ಸಿನಿಮಾ ನಟಿ ಮತ್ತು ಮಾಡೆಲ್ ಕೂಡ ಹೌದು. ವಿಷಯವೇನೆಂದರೆ ಅವರು ಕಾಂಗ್ರೆಸ್ ಪಕ್ಷ ಸೇರುವ ತವಕದಲ್ಲಿದ್ದಾರೆ. ನಿಶಾ ಅವರನ್ನು ರಾಜಕೀಯದಲ್ಲಿ ಲಾಂಚ್ ಮಾಡುವ ಉದ್ದೇಶ ಯೋಗೇಶ್ವರ್ ಗೆ ಮೊದಲಿನಿಂದರಲೂ ಇದೆ ಆದರೆ ಪ್ರಾಯಶಃ ಸರಿಯಾದ ವೇದಿಕೆ ಮತ್ತು ಸೂಕ್ತ ಸಮಯ ಒದಗಿಬಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ನಿಶಾ, ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಜೊತೆ ಕಾಣಿಸಿಕೊಳ್ಳತೊಡಗಿದಾಗ ಅವರು ಪಕ್ಷ ಸೇರುವ ಬಗ್ಗೆ ವದಂತಿ ಹರಿದಾಡತೊಡಗಿತ್ತು. ನಿಶಾ ಇಲ್ಲಿ ಅದನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸೇರಲು ತಂದೆಯವರಿಂದ ಯಾವುದೇ ಅಡಚಣೆ ಇಲ್ಲ, ಅವರು ತನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವರೆಂದು ನಿಶಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ನನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವಿರಲಿಲ್ಲ; ಬೇರೆ ಬೇರೆ ಪಕ್ಷಗಳಲ್ಲಿದ್ದೆವು, ಅಷ್ಟೇ: ಸಿಪಿ ಯೋಗೇಶ್ವರ್