ಬಿಜೆಪಿ ಮುಖಂಡರು, ಪಾಲಿಕೆ ಅಧಿಕಾರಿ ವಿರುದ್ಧ ಮರಗಳ್ಳತನ ಆರೋಪ: ಕಾಂಗ್ರೆಸ್​​ನಿಂದ ದೂರು

Edited By:

Updated on: Aug 27, 2026 | 12:05 PM

ಮಂಗಳೂರಿನ ಸೂರತ್ಕಲ್ ಬಳಿಯ ಮಹಾನಗರ ಪಾಲಿಕೆಯ STP ಜಾಗದಲ್ಲಿ ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ಲಕ್ಷಾಂತರ ರೂಪಾಯಿ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಟೆಂಡರ್ ಇಲ್ಲದೆ ನಡೆದ ಈ ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಶಾಮೀಲು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.

ಮಂಗಳೂರು, ಆಗಸ್ಟ್​​ 27: ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಮರಗಳ ಮಾರಣಹೋಮ ನಡೆದಿದ್ದು, ಸುರತ್ಕಲ್ ಮಾಧವನಗರದ ಪಾಲಿಕೆಯ STP ಜಾಗದಲ್ಲಿದ್ದ ವಿವಿಧ ಜಾತಿಯ ಮರ ಕಡಿದು ಸಾಗಾಟ ಮಾಡಲಾಗಿದೆ. ಸಾಗುವಾನಿ, ಹೆಬ್ಬಲಸು, ಹಲಸು ಸೇರಿ ವಿವಿಧ ಜಾತಿ ಮರಗಳ ಮಾರಾಟ ಸಂಬಂಧ ಬಿಜೆಪಿ ಮುಖಂಡರು, ಪಾಲಿಕೆ ಅಧಿಕಾರಿ ವಿರುದ್ಧ ಕಾಂಗ್ರೆಸ್​​ ಮರಗಳ್ಳತನ ಆರೋಪ ಮಾಡಿದೆ. ಕಾಂಪೌಂಡ್ ನಿರ್ಮಾಣ ನೆಪದಲ್ಲಿ ಮರಗಳ ಮಾರಣಹೋಮ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಮತ್ತು ಬಿಜೆಪಿ ಮುಖಂಡ ಕಂ​ ಕಂಟ್ರಾಕ್ಟರ್ ಪುಷ್ಪರಾಜ್ ವಿರುದ್ಧಸಿಎಂ, ಅರಣ್ಯ ಸಚಿವ, ಅರಣ್ಯಾಧಿಕಾರಿ, ಪೊಲೀಸರಿಗೆ ಕಂಪ್ಲೇಂಟ್​​ ನೀಡಿದೆ. ಮಂಗಳೂರು ಪಾಲಿಕೆಯಿಂದಲೂ ಕೂಡ RFOಗೆ ದೂರು ನೀಡಲಾಗಿದ್ದು, ಕದ್ದು ಮಾರಿದ್ದ ಶೇ.50ರಷ್ಟು ಮರವನ್ನು ಇಲಾಖೆ ವಶಪಡಿಸಿಕೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More