ಟಿಬಿ ಡ್ಯಾಂ: ಬಿಜೆಪಿ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ ಎಂದು ಸಿಟ್ಟಾದ ಸಿಎಂ ಸಿದ್ದರಾಮಯ್ಯ
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಆಗಸ್ಟ್ 15ರ ನಂತರ ರಾಜ್ಯದೆಲ್ಲೆಡೆ ಮತ್ತೇ ಮಳೆ ಆಗಲಿದೆ ಮತ್ತು ಮಳೆಗಾಲ ಅಕ್ಟೋಬರ್ ವರೆಗೆ ಜಾರಿಯಲ್ಲಿರುತ್ತದೆ, ಹಾಗಾಗಿ ಅರ್ಧದಷ್ಟು ಖಾಲಿಯಾಗಲಿರುವ ತುಂಗಭದ್ರಾ ಜಲಾಶಯ ಪುನಃ ತುಂಬಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾಭಾವನೆ ವ್ಯಕ್ತಪಡಿಸಿದರು.
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತುಂಗಭಧ್ರಾ ಜಲಾಶಯಕ್ಕೆ ಭೇಟಿ ನೀಡಿ ಮುರಿದು ಹೋದ 19 ನೇ ಕ್ರೆಸ್ಟ್ ಗೇಟ್ ಅನ್ನು ವೀಕ್ಷಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರು ಸಿಟ್ಟಿಗೆದ್ದ ಪ್ರಸಂಗ ನಡೆಯಿತು. ಬಿಜೆಪಿ ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದಾಗ ಕೋಪಗೊಂಡ ಅವರು ಅನಾವಶ್ಯಕ ಪ್ರಶ್ನೆಗಳನ್ನು ಕೇಳಿದರೆ ಯಾವುದಕ್ಕೂ ಉತ್ತರಿಸದೆ ತೆರಳುವುದಾಗಿ ಹೇಳಿದರು. ನಂತರ ಸಮಾಧಾನಗೊಂಡ ಅವರು ಬಿಜೆಪಿ ನಾಯಕರು ಇಂಥ ವಿಷಯದಲ್ಲೂ ರಾಜಕಾರಣ ಮಾಡಿ ಆಗಿರುವ ಅನಾಹುತಕ್ಕೆ ಸರ್ಕಾರವೇ ಹೊಣೆ ಅನ್ನುತ್ತಾರೆ. ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ನಿಗಮದಲ್ಲಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಸದಸ್ಯರೂ ಇರುತ್ತಾರೆ ಅದರೆ ತಾನು ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದರು. ಹೊಸ ಕ್ರೆಸ್ಟ್ ಗೇಟ್ ಅಳವಡಿಸಲು ಜಲಾಶಯದಿಂದ 60 ಟಿಎಂಸಿ ನೀರನ್ನು ಹೊರಹಾಕುವ ಅನಿವಾರ್ಯತೆ ಇದೆ. ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ರೈತರ ಬೆಳೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸದ್ಯದ ವಾಸ್ತವವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: TB Dam: ತುಂಗಭದ್ರಾ ಜಲಾಶಯದ ಇತರ ಭಾಗಗಳಲ್ಲೂ ಗೋಚರಿಸುತ್ತಿರುವ ಬಿರುಕುಗಳು, ಜನರಲ್ಲಿ ಹೆಚ್ಚಿದ ಆತಂಕ!