ಪ್ರಚೋದನಕಾರಿ ಹೇಳಿಕೆ ನೀಡಿ ರಾಜ್ಯದಲ್ಲಿ ಅಶಾಂತಿ ನೆಲೆಗೊಂಡಿರುವಂತೆ ಮಾಡುವುದಷ್ಟೇ ಬಿಜೆಪಿ ನಾಯಕರ ಕೆಲಸ: ದಿನೇಶ್ ಗುಂಡೂರಾವ್
ಕರಾವಳಿ ಭಾಗದಲ್ಲಿ ಏನಾದರೊಂದು ಘಟನೆ ನಡೆದರೆ ಪೂಂಜಾ ಪ್ರತಿಸಲ ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ ಒಬ್ಬ ಸೀರಿಯಲ್ ಅಫೆಂಡರ್ ಥರ ಕಾಣಿಸುತ್ತಿದ್ದಾರೆ, ಪೊಲೀಸ್ ಸ್ಟೇಷನ್ ಗೆ ಹೋಗುವುದು ಅವರಿಗೆ ಅಭ್ಯಾಸವಾದಂತಿದೆ, ಧರ್ಮದ ಹೆಸರನ್ನು ದುರುಪಯೋಗಪಡಿಸಿಕೊಂಡು ಪ್ರಚೋದಕಾರಿ ಹೇಳಿಕೆ ನೀಡುತ್ತಾರೆ, ಮಂಗಳೂರು ಜನ ಇವರ ಕುಯುಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ದಿನೇಶ್ ಹೇಳಿದರು.
ಬೆಂಗಳೂರು ಮೇ 5: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕರಾವಳಿ ಪ್ರಾಂತ್ಯದಲ್ಲಿ ಶಾಂತಿ ನೆಲಸುವುದು ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ನಾರಾಯಣಸ್ವಾಮಿ ಚಲವಾದಿ (Narayana Swamy Chalavadi) ಮತ್ತು ಶಾಸಕ ಹರೀಶ್ ಪೂಂಜಾರಂಥವರಿಗೆ ಬೇಕಿಲ್ಲ, ವಿಷಯ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಶಕ್ತಿಯೇ ಅವರಿಗಲ್ಲ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅರೋಪಿಗಳನ್ನು ಪೊಲೀಸರು ಕೇವಲ ಒಂದು ದಿನದ ಅವಧಿಯಲ್ಲಿ ಬಂಧಿಸಿದ್ದಾರೆ ಎಂದು ಹೇಳಿದರು. ಕೇಂದ್ರ ಸಚಿವ ಸೋಮಣ್ಣ ಸರ್ಕಾರ ನಿಷ್ಕ್ರಿಯಗೊಂಡಿದೆ, ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಅನ್ನುತ್ತಾರೆ, ಇವರೆಲ್ಲರ ಉದ್ದೇಶ ರಾಜ್ಯದಲ್ಲಿ ಅಶಾಂತಿ ನೆಲೆಗೊಂಡಿರಬೇಕು ಮತ್ತು ಸರ್ಕಾರವನ್ನು ದೂಷಿಸುತ್ತಿರಬೇಕು ಎಂದು ದಿನೇಶ್ ಹೇಳಿದರು.
ಇದನ್ನೂ ಓದಿ: ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ FIR
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

