ವಿಚಾರಣೆ ಎಷ್ಟು ಹೊತ್ತು ನಡೆಸಬೇಕೆಂದು ಲೋಕಾಯುಕ್ತ ಬಿಜೆಪಿ ನಾಯಕರನ್ನು ಕೇಳಬೇಕಿತ್ತೇ? ಪರಮೇಶ್ವರ್

|

Updated on: Nov 07, 2024 | 12:58 PM

ನಿನ್ನೆ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ , ಮುಖ್ಯಮಂತ್ರಿ ಮತ್ತು ಲೋಕಾಯುಕ್ತ ಅಧಿಕಾರಿಗಳ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ, ವಿಚಾರಣೆ ಕೇವಲ ಎರಡು ಗಂಟೆ ಮಾತ್ರ ನಡೆಯಲಿದೆ ಅನ್ನೋದು ಸಿಎಂ ಮೊದಲೇ ಗೊತ್ತಾಗಿತ್ತು ಅಂತ ಹೇಳಿದ್ದರು.

ಬೆಂಗಳೂರು: ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಿಚಾರಣೆಗೆ ಕರೆದಿದ್ದಾರೆ ಮತ್ತು ಸಿಎಂ ಹಾಜರಾಗಿ ಅವರು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದ್ದಾರೆ, ವಿಚಾರಣೆ ಕೇವಲ 2 ಗಂಟೆ 10 ನಿಮಿಷಗಳಲ್ಲಿ ಹೇಗೆ ಮುಗಿಯಿತು ಅಂತ ಬಿಜೆಪಿ ನಾಯಕರು ಆಕ್ಷೇಪಣೆ ಎತ್ತಿದ್ದಾರೆ, ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಯನ್ನು ಎಷ್ಟು ಹೊತ್ತು ನಡೆಸಬೇಕೆಂದು ಬಿಜೆಪಿ ನಾಯಕರನ್ನು ಕೇಳಬೇಕಿತ್ತೇ? ಅಗತ್ಯಬಿದ್ದರೆ ಅವರು ಪುನಃ ಸಿಎಂರನ್ನು ಕರೆಸುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಕ್ಫ್ ವಿವಾದ: ರೈತರಿಗೆ ನೀಡಿದ್ದ ನೋಟಿಸ್​ ಹಿಂಪಡೆಯಲು ಡಿಸಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದ ಪರಮೇಶ್ವರ್​

Published on: Nov 07, 2024 12:15 PM