ಬಸನಗೌಡ ಪಾಟೀಲ್ ಯತ್ನಾಳ್ ಮಾತುಗಳಲ್ಲಿ ವೈರಾಗ್ಯದ ಛಾಯೆ ಇಣುಕುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ!

|

Updated on: Apr 11, 2024 | 10:25 AM

ದೇಶದಲ್ಲಿ ಹಿಂದಿನ ರಾಜರ ನಡುವಿನ ಒಳಜಗಳಗಳಿಂದಾಗೇ ಮೊಘಲರು, ಆದಿಲ್ ಶಾಹ ಹೊರಗಿನಿಂದ ಬಂದು ನಮ್ಮನ್ನಾಳಿದರು, ಪಕ್ಷದೊಳಗಿನ ಜಗಳದ ಹಿನ್ನೆಲೆಯಲ್ಲಿ ಹಟಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಎದುರಾಳಿಗಳಿಗೆ ಲಾಭವಾಗಿ ಒಬ್ಬ ಎಂಪಿಯನ್ನು ನಾವು ಕಳೆದುಕೊಳ್ಳುವಂತಾಗಲ್ಲವೇ ಎಂದ ಯತ್ನಾಳ್ ಇನ್ನೆಷ್ಟು ವರ್ಷ ನಾವು ರಾಜಕಾರಣದಲ್ಲಿರಬಹುದು ಅಂತ ಹೇಳಿದರು.

ವಿಜಯಪುರ: ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಯಾವತ್ತಿಗೂ ಒಬ್ಬ ಆಶಾವಾದಿ (optimistic), ಅವರು ನೋವಿನಲ್ಲಿದ್ದರೂ ಸಕಾರಾತ್ಮಕ ಮಾತುಗಳನ್ನಾಡುತ್ತಾರೆ. ಅದರೆ, ಇತ್ತೀಚಿಗೆ ಅವರ ಮಾತುಗಳಲ್ಲಿ ವೈರಾಗ್ಯದ ಭಾವ ಕಾಣುತ್ತಿರುವುದನ್ನು ಕನ್ನಡಿಗರು ಗಮನಿಸುತ್ತಿದ್ದಾರೆ. ನಿನ್ನೆ ನಗರದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತಾಡುವಾಗ ಅವರ ಎಂದಿನ ಶೈಲಿ ಕಾಣಬಹುದಾಗಿತ್ತಾದರೂ ಒಂದು ಹಂತದಲ್ಲಿ ನಿರಾಶೆಯೂ ವ್ಯಕ್ತವಾಯಿತು. ಪ್ರಾಯಶಃ ಅವರು ಕೆಎಸ್ ಈಶ್ವರಪ್ಪ (KS Eshwarappa) ಶಿವಮೊಗ್ಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದನ್ನು ಉಲ್ಲೇಖಿಸಿ ಮಾತಾಡಿದರು. ಮನೆ ಜಗಳಗಳನ್ನು ಹೊರಗೆ ತರಬಾರದು, ನಾವು ದುರ್ಬಲಗೊಂಡರೆ ಅದು ನಮ್ಮ ಶತ್ರುವಿಗೆ ಲಾಭವಾಗುತ್ತದೆ, ದೇಶದಲ್ಲಿ ಹಿಂದಿನ ರಾಜರ ನಡುವಿನ ಒಳಜಗಳಗಳಿಂದಾಗೇ ಮೊಘಲರು, ಆದಿಲ್ ಶಾಹ ಹೊರಗಿನಿಂದ ಬಂದು ನಮ್ಮನ್ನಾಳಿದರು, ಪಕ್ಷದೊಳಗಿನ ಜಗಳದ ಹಿನ್ನೆಲೆಯಲ್ಲಿ ಹಟಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಎದುರಾಳಿಗಳಿಗೆ ಲಾಭವಾಗಿ ಒಬ್ಬ ಎಂಪಿಯನ್ನು ನಾವು ಕಳೆದುಕೊಳ್ಳುವಂತಾಗಲ್ಲವೇ ಎಂದ ಯತ್ನಾಳ್ ಇನ್ನೆಷ್ಟು ವರ್ಷ ನಾವು ರಾಜಕಾರಣದಲ್ಲಿರಬಹುದು ಅಂತ ಹೇಳಿದರು. ನಂತರ ಅವರು 1994 ರಿಂದ ಚುನಾವಣೆಗಳಲ್ಲಿ 6 ಬಾರಿ ಗೆದ್ದಿದ್ದನ್ನು ಮತ್ತು 3 ಬಾರಿ ಸೋತಿದನ್ನು ವಿವರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಈಶ್ವರಪ್ಪ ಹೇಳುತ್ತಿರುವುದೆಲ್ಲ ಶತ ಪ್ರತಿಶತ ಸತ್ಯ, ಅಪ್ಪ ಮಕ್ಕಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ: ಬಸನಗೌಡ ಪಾಟೀಲ್ ಯತ್ನಾಳ್

Follow us on