Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ಭಾಗದ ಎಲ್ಲ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪಷ್ಟ ಗೆಲುವು ದಾಖಲಿಸಲಿದೆ: ಬಸನಗೌಡ ಪಾಟೀಲ್ ಯತ್ನಾಳ್

ಕರಾವಳಿ ಭಾಗದ ಎಲ್ಲ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪಷ್ಟ ಗೆಲುವು ದಾಖಲಿಸಲಿದೆ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2024 | 2:29 PM

ಪ್ರಧಾನಿ ಮೋದಿ ಭಾರತಕ್ಕೆ ಅನಿವಾರ್ಯ ಅನ್ನೋದು ಜನಕ್ಕೆ ಖಾತ್ರಿಯಾಗಿದೆ, ಹಾಗಾಗಿ ಬಿಜೆಪಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದು ನಿಶ್ವಿತ ಎಂದು ಯತ್ನಾಳ್ ಹೇಳಿದರು. ಕೆಲ ಕ್ಷೇತ್ರಗಳ ಕಾರ್ಯಕರ್ತರಲ್ಲಿ ಅಸಮಾಧಾನಗಳಿರುವುದು ನಿಜವಾದರೂ ಪ್ರಧಾನಿ ಮೋದಿ ಅವರಿಗಾಗಿ ಅದೆಲ್ಲವನ್ನು ಬದಿಗೊತ್ತಿ ಕೆಲಸ ಮಾಡಲಿದ್ದಾರೆ ಎಂದು ಯತ್ನಾಳ್ ಹೇಳಿದರು.

ವಿಜಯಪುರ: ನೇರನುಡಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕರ್ನಾಟಕದಲ್ಲಿ ನಿಸ್ಸಂದೇಹವಾಗಿ ಬಿಜೆಪಿಗೆ ಸ್ಟಾರ್ ಪ್ರಚಾರಕ (Star Campaigner). ವಾರದ ಆರಂಭದಲ್ಲಿ ಅವರು ಉಡುಪಿ ಮತ್ತು ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದನ್ನು ನಾವು ವರದಿ ಮಾಡಿದ್ದೇವೆ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕರಾವಳಿ ಭಾಗದ ಎಲ್ಲ ಮೂರು ಕ್ಷೇತ್ರಗಳಲ್ಲಿ-ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರುಗಳಲ್ಲಿ ಬಿಜೆಪಿ ಗೆಲ್ಲಲಿದೆ. ಜನನಲ್ಲಿ ನರೇಂದ್ರ ಮೋದಿಯವರೆ (PM Narendra Modi) ಮತ್ತೇ ಪ್ರಧಾನಿಯಾಗಬೇಕೆಂಬ ಮಹದಾಸೆ ಇದೆ. ಪ್ರಧಾನಿ ಮೋದಿ ಭಾರತಕ್ಕೆ ಅನಿವಾರ್ಯ ಅನ್ನೋದು ಜನಕ್ಕೆ ಖಾತ್ರಿಯಾಗಿದೆ, ಹಾಗಾಗಿ ಬಿಜೆಪಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದು ನಿಶ್ವಿತ ಎಂದು ಯತ್ನಾಳ್ ಹೇಳಿದರು. ಕೆಲ ಕ್ಷೇತ್ರಗಳ ಕಾರ್ಯಕರ್ತರಲ್ಲಿ ಅಸಮಾಧಾನಗಳಿರುವುದು ನಿಜವಾದರೂ ಪ್ರಧಾನಿ ಮೋದಿ ಅವರಿಗಾಗಿ ಅದೆಲ್ಲವನ್ನು ಬದಿಗೊತ್ತಿ ಕೆಲಸ ಮಾಡಲಿದ್ದಾರೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೇ ನಾವು ಬರ್ತೀವಿ, ನಾನೇ ಮುಖ್ಯಮಂತ್ರಿ ಆಗ್ತೀನಿ! ಬಸನಗೌಡ ಪಾಟೀಲ್ ಯತ್ನಾಳ್