ನಾಡಿನೆಲ್ಲೆಡೆ ಸಂಭ್ರಮದ ರಂಜಾನ್, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್
ಸಚಿವನಿಗೆ ಕೆಲ ಅಭಿಮಾನಿಗಳ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಸಹ ಹಬ್ಬದ ಶುಭಾಷಯಗಳನ್ನು ಹೇಳಿದರು. ಈ ಬಾರಿ ರಂಜಾನ್ ಹಬ್ಬ ಕಡು ಬೇಸಿಗೆಯಲ್ಲಿ ಬಂದಿರುವುದರಿಂದ ಈದ್ಗಾ ಮೈದಾನದಲ್ಲಿ ಜನ ನೆರಳಿರುವ ಕಡೆ ಸೇರಲು ಪ್ರಯತ್ನಿಸುತ್ತಿದ್ದಿದ್ದು ಸಾಮಾನ್ಯ ದೃಶ್ಯವಾಗಿತ್ತು
ಬೆಂಗಳೂರು: ನಾಡಿನೆಲ್ಲೆಡೆ ಮುಸ್ಲಿಂ ಸಮುದಾಯದವರು ಸಂಭ್ರಮ ಸಡಗರಗಳಿಂದ ಈದ್-ಉಲ್-ಫಿತರ್ (Eid-Ul-Fitr) (ರಂಜಾನ್) ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸುತ್ತಿದ್ದಾರೆ. ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ (Eidgah Maidan) ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆಗಾಗಿ ಜಮಾಯಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ತಮ್ಮ ಮಗ ಹಾಗೂ ಸಿನಿಮಾ ನಟ ಜೈದ್ ಖಾನ್ ಅವರೊಂದಿಗೆ ಹಬ್ಬದ ನಮಾಜ್ ನಲ್ಲಿ ಭಾಗಿಯಾಗಲು ಅಗಮಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸಚಿವನಿಗೆ ಕೆಲ ಅಭಿಮಾನಿಗಳ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಸಹ ಹಬ್ಬದ ಶುಭಾಷಯಗಳನ್ನು ಹೇಳಿದರು. ಈ ಬಾರಿ ರಂಜಾನ್ ಹಬ್ಬ ಕಡು ಬೇಸಿಗೆಯಲ್ಲಿ ಬಂದಿರುವುದರಿಂದ ಈದ್ಗಾ ಮೈದಾನದಲ್ಲಿ ಜನ ನೆರಳಿರುವ ಕಡೆ ಸೇರಲು ಪ್ರಯತ್ನಿಸುತ್ತಿದ್ದಿದ್ದು ಸಾಮಾನ್ಯ ದೃಶ್ಯವಾಗಿತ್ತು. ಚಿಕ್ಕ ಪುಟ್ಟ ಮಕ್ಕಳು ಹೊಸ ಹೊಸ ಪೋಷಾಕು ಧರಿಸಿ ತಮ್ಮ ತಂದೆ, ಅಣ್ಣ-ಅಂಕಲ್ ಗಳೊಂದಿಗೆ ಬಂದು ನಮಾಜ್ ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ