ದೊಡ್ಡಬಳ್ಳಾಪುರದ ಶ್ರೀರಾಮೋತ್ಸವದಲ್ಲಿ ಜನರ ಕಣ್ಣಿಗೆ ಬಿದ್ದ ಬಾಲರಾಮ; ಯಾರಿವನು?
ನಾಳೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ದೇಶದಲ್ಲಿ ಕೋಟ್ಯಂತರ ಹಿಂದೂಗಳು ಹಬ್ಬ ಆಚರಿಸಲು ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ವಿವಿಧ ಕಡೆಗಳಲ್ಲಿ ಶ್ರೀರಾಮೋತ್ಸವ ಆಚರಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಬಾಲರಾಮನೊಬ್ಬ ನೋಡುಗರ ಗಮನ ಸೆಳೆದಿದ್ದಾನೆ. ಯಾರಿವನು ಗೊತ್ತಾ?
ದೇವನಹಳ್ಳಿ, ಜ.21: ನಾಳೆ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆಗೊಳ್ಳಲಿದ್ದು, ದೇಶದಲ್ಲಿ ಕೋಟ್ಯಂತರ ಹಿಂದೂಗಳು ಹಬ್ಬ ಆಚರಿಸಲು ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ವಿವಿಧ ಕಡೆಗಳಲ್ಲಿ ಶ್ರೀರಾಮೋತ್ಸವ ಆಚರಿಸಲಾಗುತ್ತಿದೆ. ದೊಡ್ಡಬಳ್ಳಾಪುರ (Doddaballapura) ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಬಾಲರಾಮನೊಬ್ಬ ನೋಡುಗರ ಗಮನ ಸೆಳೆದಿದ್ದಾನೆ. ಈ ಮುದ್ದಾದ ಮಗು ಬೇರೆ ಯಾರೂ ಅಲ್ಲ. ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಪುತ್ರ. ತನ್ನ ಮಗನಿಗೆ ಶ್ರೀರಾಮನ ವೇಷ ಹಾಕಿಸಿ ಶ್ರೀರಾಮೋತ್ಸವಕ್ಕೆ ಕರೆತಂದಿದ್ದಾರೆ. ಈ ಮಗು ಬಾಲರಾಮನ ವೇಷದಲ್ಲಿ ಎಷ್ಟು ಮುದ್ದಾಗಿ ಕಾಣುತ್ತಿದೆ ಎಂದು ನೀವೇ ನೋಡಿ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos