ಜೆಪಿ ಪಾರ್ಕ್​ನಲ್ಲಿ ಗಲಾಟೆ ಮಾಡಿದ ಶಾಸಕ ಮುನಿರತ್ನ ಅವರನ್ನು ಎಳೆದೊಯ್ದ ಪೊಲೀಸರು

Updated By: ಸುಷ್ಮಾ ಚಕ್ರೆ

Updated on: Oct 12, 2025 | 10:50 AM

ಮತ್ತಿಕೆರೆಯ ಜೆಪಿ ಪಾರ್ಕ್​ಗೆ ಗಣವೇಷಧಾರಿಯಾಗಿ ಬಂದಿದ್ದ ಶಾಸಕ ಮುನಿರತ್ನ ಡಿಕೆಶಿ ಅವರ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಮುನಿರತ್ನರನ್ನು ಕಂಡು ಕಾಣದಂತೆ ಮುಂದೆ ಹೋದ ಡಿಸಿಎಂ ಡಿಕೆ ಶಿವಕುಮಾರ್ ಪಾರ್ಕ್​ನ ಅರ್ಧಭಾಗ ಸುತ್ತಾಡಿದ ನಂತರ ಅವರನ್ನು ಮಾತನಾಡಿಸಿದ್ದಾರೆ. ವೇದಿಕೆ ಕಾರ್ಯಕ್ರಮದ ವೇಳೆ ಸಭಿಕರ ಸಾಲಿನಲ್ಲಿ ಕುಳಿತಿದ್ದ ಮುನಿರತ್ನ ಅವರನ್ನು ನಿರೂಪಕಿ ವೇದಿಕೆಗೆ ಆಹ್ವಾನಿಸಿದ್ದಾರೆ. ಆಗ ವೇದಿಕೆಯಲ್ಲಿ ಮೈಕ್ ಹಿಡಿದು ಕಿರುಚಾಡಿದ ಮುನಿರತ್ನ ಇದು ಸಾರ್ವಜನಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಕಾರ್ಯಕ್ರಮ ಎಂದು ಟೀಕಿಸಿದ್ದಾರೆ. ಸ್ಥಳೀಯ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 12: ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಮತ್ತಿಕೆರೆಯ ಜೆಪಿ ಪಾರ್ಕ್​ಗೆ ಗಣವೇಷಧಾರಿಯಾಗಿ ಬಂದಿದ್ದ ಶಾಸಕ ಮುನಿರತ್ನ (Munirathna) ಡಿಕೆಶಿ ಅವರ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಮುನಿರತ್ನರನ್ನು ಕಂಡು ಕಾಣದಂತೆ ಮುಂದೆ ಹೋದ ಡಿಸಿಎಂ ಡಿಕೆ ಶಿವಕುಮಾರ್ ಪಾರ್ಕ್​ನ ಅರ್ಧಭಾಗ ಸುತ್ತಾಡಿದ ನಂತರ ಅವರನ್ನು ಮಾತನಾಡಿಸಿದ್ದಾರೆ. ವೇದಿಕೆ ಕಾರ್ಯಕ್ರಮದ ವೇಳೆ ಸಭಿಕರ ಸಾಲಿನಲ್ಲಿ ಕುಳಿತಿದ್ದ ಮುನಿರತ್ನ ಅವರನ್ನು ನಿರೂಪಕಿ ವೇದಿಕೆಗೆ ಆಹ್ವಾನಿಸಿದ್ದಾರೆ. ಆಗ ವೇದಿಕೆಯಲ್ಲಿ ಮೈಕ್ ಹಿಡಿದು ಕಿರುಚಾಡಿದ ಮುನಿರತ್ನ ಇದು ಸಾರ್ವಜನಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಕಾರ್ಯಕ್ರಮ ಎಂದು ಟೀಕಿಸಿದ್ದಾರೆ. ಸ್ಥಳೀಯ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ವೇಳೆ ಡಿಕೆಶಿ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದರಿಂದ ಪೊಲೀಸರು ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ಎದುರಲ್ಲೇ ಹೊರಗೆ ಎಳೆದುಕೊಂಡು ಹೋಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Oct 12, 2025 10:48 AM