ಕ್ಯಾಚ್ ಹಿಡಿದು ಹೊರಬಿದ್ದ ಸಾಯಿ ಸುದರ್ಶನ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ ಯಶಸ್ವಿ ಜೈಸ್ವಾಲ್ (175) ಹಾಗೂ ಶುಭ್ಮನ್ ಗಿಲ್ (129) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ವೆಸ್ಟ್ ಇಂಡೀಸ್ 72 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಿಂದ ಟೀಮ್ ಇಂಡಿಯಾ ಆಟಗಾರ ಸಾಯಿ ಸುದರ್ಶನ್ ಹೊರಗುಳಿದಿದ್ದಾರೆ. ಈ ಪಂದ್ಯದ ಎರಡನೇ ದಿನದಾಟದಂದು ಸಾಯಿ ಅದ್ಭುತ ಕ್ಯಾಚ್ ಹಿಡಿದಿದ್ದರು. ಈ ವೇಳೆ ಗಾಯಗೊಂಡಿದ್ದ ಅವರು ಮೂರನೇ ದಿನದಾಟದಂದು ಫೀಲ್ಡಿಂಗ್ಗೆ ಆಗಮಿಸಿರಲಿಲ್ಲ.
ರವೀಂದ್ರ ಜಡೇಜಾ ಎಸೆದ 7ನೇ ಓವರ್ನ 2ನೇ ಎಸೆತದಲ್ಲಿ ಜಾನ್ ಕ್ಯಾಂಪ್‌ಬೆಲ್ ಸ್ವೀಪ್ ಶಾಟ್ ಬಾರಿಸಿದ್ದರು. ಈ ವೇಳೆ ಚೆಂಡು ಶಾರ್ಟ್ ಲೆಗ್‌ನಲ್ಲಿ ಫೀಲ್ಲಿಂಗ್ ನಿಂತಿದ್ದ ಸಾಯಿ ಸುದರ್ಶನ್ ಅವರ ಕೈಗೆ ಬಡಿದಿದೆ. ತಕ್ಷಣವೇ ಚೆಂಡನ್ನು ಕೆಳಕ್ಕೆ ಬೀಳದಂತೆ ಬಂಧಿಸುವಲ್ಲಿ ಯಶಸ್ವಿಯಾದರು. ಈ ಅದ್ಭುತ ಕ್ಯಾಚ್ನಿಂದ ವೆಸ್ಟ್ ಇಂಡೀಸ್ ತಂಡವು ಮೊದಲ ವಿಕೆಟ್ ಕಳೆದುಕೊಂಡಿತು.
ಇತ್ತ ಈ ಕ್ಯಾಚ್ನಿಂದ ಸಾಯಿ ಸುದರ್ಶನ್ ಅವರ ಕೈಗೆ ಗಾಯವಾಗಿದೆ. ಹೀಗಾಗಿ ಅವರು ಮೂರನೇ ದಿನದಾಟದಿಂದ ಹೊರಗುಳಿದಿದ್ದಾರೆ. ಇದಾಗ್ಯೂ ಅವರಿಗೆ ಉಂಟಾಗಿರುವ ಗಾಯವು ಗಂಭೀರವಲ್ಲ ಎಂದು ಬಿಸಿಸಿಐ ತಿಳಿಸಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ ಯಶಸ್ವಿ ಜೈಸ್ವಾಲ್ (175) ಹಾಗೂ ಶುಭ್ಮನ್ ಗಿಲ್ (129) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ವೆಸ್ಟ್ ಇಂಡೀಸ್ 72 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿದೆ.

