Karnataka Budget Session: ಬಿಜೆಪಿ ಯಾವತ್ತೂ ಮುಂಬಾಗಿಲಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಶನ್ ಕಮಲ ಆರಂಭಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ

|

Updated on: Feb 29, 2024 | 12:19 PM

Karnataka Budget Session: ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದಿಲ್ಲ, 2008 ರಲ್ಲಿ ಅವರಿಗೆ ದಕ್ಕಿದ್ದು 110 ಸ್ಥಾನ ಮಾತ್ರ. ಆಗಲೇ ಯಡಿಯೂರಪ್ಪ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು ಎಂದು ಸಿದ್ದರಾಮಯ್ಯ ಹೇಳಿದರು. ನಂತರ 2018ರಲ್ಲಿ ಬಿಜೆಪಿ ಸಿಕ್ಕಿದ್ದು 100 ಸೀಟು ಮಾತ್ರ. ಆದರೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಖರೀದಿಸಿ ಇವರು ಅಧಿಕಾರಕ್ಕೆ ಬಂದರು ಎಂದು ಅವರು ಹೇಳಿದರು.

ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಜ್ಯದಲ್ಲಿ ಆಪರೇಶನ್ ಕಮಲ (Operation Lotus) ಆರಂಭಿಸಿದ್ದೇ ಬಿಎಸ್ ಯಡಿಯೂರಪ್ಪನವರು (BS Yediyurappa) ಎಂದು ಹೇಳಿದರು. ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದಿಲ್ಲ, 2008 ರಲ್ಲಿ ಅವರಿಗೆ ದಕ್ಕಿದ್ದು 110 ಸ್ಥಾನ ಮಾತ್ರ. ಆಗಲೇ ಯಡಿಯೂರಪ್ಪ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು ಎಂದು ಸಿದ್ದರಾಮಯ್ಯ ಹೇಳಿದರು. ನಂತರ 2018ರಲ್ಲಿ ಬಿಜೆಪಿ ಸಿಕ್ಕಿದ್ದು 100 ಸೀಟು ಮಾತ್ರ. ಆದರೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಖರೀದಿಸಿ ಇವರು ಅಧಿಕಾರಕ್ಕೆ ಬಂದರು ಎಂದು ಹೇಳಿದ ಸಿದ್ದರಾಮಯ್ಯ, ಇದುವರೆಗೆ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಜನಾರ್ಶೀವಾದದೊಂದಿಗೆ ಮುಂಬಾಗಿಲಿಂದ ಬಂದು ಅಧಿಕಾರ ನಡೆಸಿಲ್ಲ ಎಂದರು. 2023-24 ಸಾಲಿಗೆ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಗಿಂತ ಅದೇ ವರ್ಷ ತಾವು ಅಧಿಕಾರಕ್ಕೆ ಬಂದು ರೂ. 62,200 ಕೋಟಿಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಿದ್ದೆ ಎಂದು ಹೇಳಿದ ಸಿದ್ದರಾಮಯ್ಯ ವಿಷಯ ಹೀಗಿರುವಾಗ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಮೀಸಲಿಟ್ಟಿಲ್ಲ ಅಂತ ಬಿಜೆಪಿ ನಾಯಕರು ಅದ್ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Budget Session: ಪಾಕ್ ಪರ ಘೋಷಣೆ; ತನಿಖೆ ಜಾರಿಯಲ್ಲಿದೆ 7 ಜನರ ವಿಚಾರಣೆ ನಡೆಸಲಾಗಿದೆ: ಸಿದ್ದರಾಮಯ್ಯ